ನ.17ರಂದು ನಂಜನಗೂಡಿಗೆ ಸಿ.ಎಂ ಸಿದ್ದರಾಮಯ್ಯ

ಸಂಜೆವಾಣಿ ವಾರ್ತೆ
ನಂಜನಗೂಡು: ನ.15:- ತಾಲೂಕಿನ ಕಳಲೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕಡೆ ಮಾಲಮ್ಮ ಎಂಬ ದೇವಸ್ಥಾನ ಉದ್ಘಾಟನೆಗೆ ಆಗಮಿಸುತ್ತಿದ್ದಾರೆ ಆದ್ದರಿಂದ ಶಾಸಕ ದರ್ಶನ್ ಧ್ರುವ ನಾರಾಯಣ್ ಅಧ್ಯಕ್ಷತೆಯಲ್ಲಿ ಪ್ರವಾಸಿ ಮಂದಿರದಲ್ಲಿ ಕಾರ್ಯಕ್ರಮ ಬಗ್ಗೆ ಚರ್ಚಿಸಲು ಪಕ್ಷದ ಕಾರ್ಯಕರ್ತರು ಮುಖಂಡರು ಬ್ಲಾಕ್ ಅಧ್ಯಕ್ಷರುಗಳು ನಗರಸಭೆ ಸದಸ್ಯರುಗಳು ಜೊತೆ ಪೂರ್ವಭಾವಿ ಸಭೆ ನಡೆಸಿ ಚರ್ಚಿಸಿದರು
ಶಾಸಕರು ಮಾತನಾಡಿ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರು ಮೊದಲ ಬಾರಿಗೆ ಮುಖ್ಯಮಂತ್ರಿ ಆದ ಮೇಲೆ ತಾಲೂಕಿನ ಕಳಲೆ ಗ್ರಾಮಕ್ಕೆ ದೇವಸ್ಥಾನದ ಉದ್ಘಾಟನೆಗೆ ಬರುತ್ತಿದ್ದಾರೆ ಇವರನ್ನು ನಗರದ ಹುಲ್ಲಹಳ್ಳಿ ವೃತ್ತದಲ್ಲಿ ಬರಮಾಡಿಕೊಳ್ಳಬೇಕು ನಗರಸಭೆ ಮತ್ತು ತಾಲೂಕು ಆಡಳಿತ ವತಿಯಿಂದ ಸ್ವಾಗತ ಬಯಸುತ್ತಾರೆ ತದನಂತರ ಉಳ್ಳಹಳ್ಳಿ ವೃತ್ತದಲ್ಲಿ ಸುಮಾರು 2000ಕ್ಕೂ ಹೆಚ್ಚು ಕಾರ್ಯಕರ್ತರು ಮುಖಂಡರು ಅಭಿಮಾನಿಗಳು ಹಿತೈಷಿಗಳು ಸೇರಿ ಅದ್ದೂರಿಯಾಗಿ ಸ್ವಾಗತಿಸಲು ತೀರ್ಮಾನಿಸಲಾಯಿತು ಜೊತೆಗೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಬಗ್ಗೆ ಚರ್ಚಿಸಲಾಯಿತು ಹಾಗೂ ಬೈಕ್ ರಾಲಿ ಮೂಲಕ ಅವರನ್ನು ಕರೆತರುವಂತೆ ನಿಗದಿಪಡಿಸಲಾಯಿತು ಸುಮಾರು ಎಲ್ಲಾ ಕಡೆ ಫ್ಲಕ್ಸ್ ಗಳನ್ನು ಹಾಕಲು ಸೂಚಿಸಿದರು
ದೇವಸ್ಥಾನ ಉದ್ಘಾಟನೆಯ ಮುಂಚೆ ಪಟ್ಟಣದ ಕನಕದಾಸ ಟ್ರಸ್ಟ್ ವತಿಯಿಂದ ವಾಣಿಜ್ಯ ಮಳಿಗೆ ನಿರ್ಮಿಸಲು ಗುದ್ದಲಿ ಪೂಜೆ ನೆರವೇರಿಸುವುದು ಈ ರೀತಿ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿ
ಕಳಲೆ ಗ್ರಾಮದಲ್ಲಿ ಬರುವ ಎಲ್ಲಾ ಕಾರ್ಯಕರ್ತರ ಮುಖಂಡರು ಅಭಿಮಾನಿಗಳಿಗೂ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು
ಪೂರ್ವಭಾವಿ ಸಭೆಯಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಬ್ಲಾಕ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್ ಶ್ರೀಕಂಠ ನಾಯಕ ಶಂಕರ್ ಖಾದರ್ ರವಿಕುಮಾರ್ ಮಂಜುನಾಥ ಮಾರುತಿ ನಾಗೇಶ್ ರಾಜ್ ವಿಜಯ್ ಕುಮಾರ್ ದೊರೆಸ್ವಾಮಿ ನಾಯಕ ಶ್ರೀನಿವಾಸ್ ಮೂರ್ತಿ ಯುವ ಮುಖಂಡ ಮದನ್ ಸೇರಿದಂತೆ ಇತರರು ಇದ್ದರು