ನ 15 ರಂದು ಹಜರತ್ ಲಾಡ್ಲೇ ಮಶಾಕ ಉರುಸ

ಆಳಂದ:ನ.12:ಆಳಂದ ಪಟ್ಟಣದ ಸೂಪ್ರಸಿದ್ಧ ಹಜರತ್ ಲಾಡ್ಲೇ ಮಶಾಕ ಅನ್ಸಾರಿ ರಹಮತುಲ್ಲಾಹ ಅಲೈಹ ಉರುಸನ್ನು ಇದೇ ನ 15 ರಂದು ಪ್ರತಿ ವರ್ಷದಂತೆ ಜರುಗಲಿದೆ ಎಂದು ದರ್ಗಾ ಕಮೀಟಿ ಅಧ್ಯಕ್ಷ ಆಸೀಫ್ ಆನ್ಸಾರಿ ಅವರು ತಿಳಿಸಿದ್ದಾರೆ.

ಈ ಕುರಿತು ಗುರುವಾರ ದರ್ಗಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 15 ರಂದು ಸಾಯಂಕಾಲ 4 ಗಂಟೆಗೆ ಗಂಧಧೋತ್ಸವ ಮೇರವಣಿಗೆ ದರ್ಗಾ ತಲಪುವದು, ನ 16 ರಂದು ದಿಪೋತ್ಸವ ಕಾರ್ಯಕ್ರಮದೊಂದಿಗೆ ಮಧ್ಯಪ್ರದೇಶದ ಅಫಾತಾಬ ಖಾದ್ರಿ ಇಂದುರ ಇವರ ತಂಡದಿಂದ ಕವಾಲಿ ಕಾರ್ಯಕ್ರಮ ಹಾಗು ಬಾಂಬೈ, ಬೀದರ, ಲಾತೂರ ಕಲಾವಿದರಿಂದ ವಿವಿಧ ಸಂಸ್ಕøತಿಕ ಕಾರ್ಯಕ್ರಮ ಜರುಗಲಿದ್ದು. 2 ವರ್ಷ ದಿಂದ ಜಾತ್ರೆ ಸರಳ ರೀತಿಯಲ್ಲಿ ಆಚರಿಸಲಾಗಿತ್ತು. ಕೊರೊನಾ ಸಂಕಷ್ಟ ಎದುರು ಆಗಿತ್ತು. ದರ್ಗಾ ಬರುವ ಭಕ್ತಾಧಿಗಳು ಕಡ್ಡಾಯವಾಗಿ ಮಾಸ್ಕ ಧರಿಸಿಕೊಂಡು ಕೊರೊನಾ ನಿಯಮ ಪಾಲಿಸಬೇಕೆಂದು ಮನವಿ ಮಾಡಿದ್ದಾರೆ.

ಕಮೀಟಿಯ ಕಾರ್ಯದರ್ಶೀ ಖಲೀಲ ಅನ್ಸಾರಿ ಹಾಗೂ ಮೊಹಿದ ಅನ್ಸಾರಿ, ಫಿರದೋಸ ಅನ್ಸಾರಿ, ಯೂಸುಫ್ ಅನ್ಸಾರಿ ಉಪಸ್ಥಿತರಿದ್ದರು.