ನ.15 ರಂದು ಗ್ರಾಮ ಪಂಚಾಯಿತಿ ಮಟ್ಟದಿಂದ ಕಬ್ಬಡಿ ಖೋಖೋ ಕ್ರೀಡಾ ಕೂಟ

ಗುರುಮಠಕಲ್:ನ.13: ತಾಲೂಕು ಸಮಿಪದ ಚಂಡ್ರಿಕಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಯಲ್ಲಿ ಗ್ರಾಮಿಣ ಕ್ರೀಡಾ ಕೂಟ ಆಯೋಜಿಸಿದ್ದು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಚಂಡ್ರಿಕಿ. ಕೇಶ್ವಾರ. ಮಡೆಪಲ್ಲಿ ಹಾಗೂ ಕೇಶ್ವಾರ ತಾಂಡಾ ಕ್ರೀಡಾ ಪಟುಗಳು ಗ್ರಾಮ ಪಂಚಾಯಿತಿ ಮಟ್ಟದಿಂದ ಆಯೋಜಿಸಿದೆ,
ಕಬ್ಬಡಿ ಮತ್ತು ಖೋಖೋ ಆಟಗಳಲ್ಲಿ ಆಸಕ್ತಿ ಯುಳ್ಳ ವರು ತಮ್ಮ ತಮ್ಮ ತಂಡ ದೊಂದಿಗೆ ದಿನಾಂಕ 14-11-2022 ಸೋಮವಾರ ಸಾಯಂಕಾಲ 5-00 ಗಂಟೆಯವರೆಗೆ ತಮ್ಮ ತಂಡದ ಹೆಸರು ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ತಂಡದ ಹೆಸರು ನೊಂದಾಯಿಸಿ ಕೊಳ್ಳಬೇಕು ದಿನಾಂಕ 15-11-2022 ಮಂಗಳ ದಂದು ಸರ್ಕಾರಿ ಪ್ರೌಢಶಾಲೆ ಚಂಡ್ರಿಕಿ ಆಟದ ಮೈದಾನದಲ್ಲಿ ಕಬ್ಬಡಿ ಮತ್ತು ಖೋಖೋ ಆಟಗಳು ಆಡಿಸಲಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಕರವಸೂಲಿಗಾರು ಖಾಜಾ ಹುಶೇನ್ ತಿಳಿಸಿದರು.