ನ.15 ರಂದು ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭ

ಧಾರವಾಡ, ನ 13: ನವೆಂಬರ್ 15 ರಂದು 69 ನೇ ಅಖೀಲ ಭಾರತ ಸಹಕಾರ ಸಪ್ತಾಹ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ ತಿಳಿಸಿದರು.
ಧಾರವಾಡ ನಗರದ ಕೆಎಂಎಫ್ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭಾರತ 75 ಸಹಕಾರ ಸಂಸ್ಥೆಗಳ ಬೆಳವಣಿಗೆ ಮತ್ತು ಮುಂದಿನ ಭವಿಷ್ಯ ಎಂಬ ಧ್ಯೇಯದೊಂದಿಗೆ ಈ ಸಪ್ತಾಹ ಜರುಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗೋ ಪೂಜೆ, ಸಹಕಾರ ಧ್ವಜಾರೋಹಣ, ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು. ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀ, ಸಹಕಾರಿ ಪಿತಾಮಹ ಸಿದ್ದನಗೌಡ ಪಾಟೀಲ, ಕ್ಷೀರ ಪಿತಾಮಹ ಡಾ. ವರ್ಗಿಸ್ ಕುರಿಯನ್ ಹಾಗೂ ಎಂ.ವಿ. ಕೃಷ್ಣಪ್ಪನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ ಹೊರಕೇರಿ, ಬಾಬಾಗೌಡ ಪಾಟೀಲ, ಶಂಕರಣ್ಣ ರಾಯನಾಳ, ಸುರೇಶ ಬನವಿ, ಗೀತಾ ಮರಿಲಿಂಗಣ್ಣವರ, ನೀಲಕಂಠ ಅಸೂಟಿ, ಎಚ್.ಜಿ. ಹಿರೇಗೌಡರ, ಶಂಕರ ಹೆಗಡೆ, ಮಂಜುನಾಥಗೌಡ ಪಾಟೀಲ, ರಂಜಿತಾ ಪೆÇೀಳ ಸೇರಿದಂತೆ ಹಲವರು ಇದ್ದರು.