ನ.14 ರಂದು ‘ಆಹನ’ ಕಿರುಚಿತ್ರ ಯೂಟ್ಯೂಬ್ ಚಾನೆಲ್‍ನಲ್ಲಿ ಬಿಡುಗಡೆ

ಮೈಸೂರು, ನ.12: ದೇಚಿ ಕ್ರಿಯೇಷನ್ಸ್ ವತಿಯಿಂದ ನವೆಂಬರ್ 14 ರಂದು ‘ಆಹನ’ ಎಂಬ ಕಿರುಚಿತ್ರ ದೇಚಿ ಕ್ರಿಯೇಷನ್ಸ್ ಎಂಬ ಯೂಟ್ಯೂಬ್ ಚಾನೆಲ್‍ನಲ್ಲಿ ಬಿಡುಗಡೆಯಾಗಲಿದೆ ಎಂದು ದೇವರಾಜು ಪಿ. ಚಿಕ್ಕಹಳ್ಳಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಚಿತ್ರವನ್ನು ಶ್ರೇಯಸ್ ಪಿ. ರವರು ನಿರ್ದೇಶಿಸಿದ್ದಾರೆ. ಈ ಕಿರುಚಿತ್ರವು ಸಾಮಾಜಿಕ ಕಳಕಳಿಯುಳ್ಳ ಕುಟುಂಬ, ಹುಡುಕಾಟ, ಪ್ರೀತಿ ಎಲ್ಲವೂ ಇದೆ. ಈ ಕಿರುಚಿತ್ರವು ಕುಟುಂಬಾಧಾರಿತ ಚಿತ್ರವಾದ್ದರಿಂದ ಕುಟುಂದವರೆಲ್ಲರೂ ನೋಡಬಹುದಾದ ಕಥೆಯಾಗಿದೆ.
ಸುಮಾರು ಎಂಟು ತಿಂಗಳವರೆಗೆ ಕಥೆ , ಚಿತ್ರಕಥೆ , ಸಂಭಾಷಣೆ ಮತ್ತು ಚಿತ್ರೀಕರಣ ಮಾಡಿ ಸ್ಟುಡಿಯೋ ಕೆಲಸಗಳು ಮುಗಿದು ಬಿಡುಗಡೆಗೆ ಕಾತುರಗೊಂಡಿದೆ.
ಇಲ್ಲಿ ಸುಮಾರು ನೂರಕ್ಕೂ ಅಧಿಕ ಮಂದಿ ದುಡಿದಿದ್ದಾರೆ. ಚಿತ್ರತಂಡ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತದೆ. ಸಿನಿಪ್ರಿಯರು ಮತ್ತು ಕಲಾಭಿಮಾನಿಗಳು ಹಾಗೂ ಮಾಧ್ಯಮ ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಿರುಚಿತ್ರವನ್ನು ವೀಕ್ಷಿಸಿ ಚಾನೆಲ್‍ಗೆ Subsಛಿಡಿibe ಆಗುವ ಮೂಲಕ ನಮ್ಮನ್ನು ಹರಸಿ, ಬೆಂಬಲಿಸಿ ಮತ್ತು ಗೆಲ್ಲಿಸಿ ಎಂದು ಈ ಮೂಲಕ ಚಿತ್ರತಂಡ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಕಿರುಚಿತ್ರದ ನಿರ್ದೇಶಕ ಶ್ರೇಯಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.