ನ. 13 ರಂದು ಜಯಂತಿ ಆಚರಣೆ


ಧಾರವಾಡ,ನ.11: ನವೆಂಬರ್ 13 ರಂದು ಕರ್ನಾಟಕ ಕುರುಬ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ದಾಸ ಶ್ರೇಷ್ಠ ಕನಕದಾಸರ ಜಯಂತಿ ಹಾಗೂ ಸಮಾಜದ ಸಾಧಕರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ನಿಂಗಪ್ಪ ಸವನೂರ ತಿಳಿಸಿದರು.
ಧಾರವಾಡ ಆಲೂರು ವೆಂಕಟರಾವ ಸಭಾಂಗಣದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ರೇವಣಸಿದ್ಧೇಶ್ವರ ಮಠದ ಬಸವರಾಜ ದೇವರು ಸ್ವಾಮೀಜಿ ವಹಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಂಗಪ್ಪ ಸವನೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಬಸವರಾಜ ಗುರಿಕಾರ, ಪೆÇ್ರ. ಮಲ್ಲಿಕಾ ಘಂಟಿ, ಮಲ್ಲೇಶಪ್ಪ ಹೊರಪೇಟಿ, ಸಿ ಎಸ್ ಪಾಟೀಲ, ರವಿಕುಮಾರ್ ಮಾಳಗೇರ, ವಾಯ್ ಎಮ್ ಉಪ್ಪಿನ, ಶಂಕರಾನಂದ ಬನಶಂಕರಿ, ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪೆÇ್ರೀ. ಮಹಾಂತೇಶ ಜೋರಿ, ಪೆÇ್ರ. ರಾಮಚಂದ್ರ ಹೆಗಡೆ ಇದ್ದರು.