ನ.13 ರಂದು ಈ ಬಾರಿಯ ಹಂಪಿ ಉತ್ಸವ

* ಒಂದು ದಿನಕ್ಕೆ ಸೀಮಿತ

*ವೇದಿಕೆ ಕಾರ್ಯಕ್ರಮ ಇಲ್ಲ

*ಕಲಾ ತಂಡಗಳ‌ ಶೋಭಾಯಾತ್ರೆ

* ತುಂಗಾ ಆರತಿ‌ ಮಾತ್ರ

ಬಳ್ಳಾರಿ ನ 05 : ಈ ಬಾರಿಯ ಹಂಪಿ‌ ಉತ್ಸವವನ್ನು ನವೆಂಬರ್ 13 ರಂದು ಒಂದು ದಿನ ಮಾತ್ರ ನಡೆಸಲು ತೀರ್ಮಾನಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಂಗ್ ಹೇಳಿದ್ದಾರೆ.ದೂರವಾಣಿಯಲ್ಲಿ ಸಂಜೆವಾಣಿಯೊಂದಿಗೆ ಮಾತನಾಡಿದ ಅವರು. ಪ್ರತಿ ವರ್ಷ ಮೂರು ದಿನಗಳ‌ ಕಾಲ‌ ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಇಂದಿನ‌ ಪೀಳಿಗೆಗೆ ಪರಿಚಯಿಸಲು ಹಂಪಿ ಉತ್ಸವ ನಡೆಸುತ್ತಿತ್ತು. ಆದರೆ ಈ ಬಾರಿ ಕೋವಿಡ್ ನಿಂದಾಗಿ ನ 13ರಂದು ಒಂದೇ ದಿನ ‘ಹಂಪಿ ಉತ್ಸವ’ ಆಚರಿಸಲು ತೀರ್ಮಾನಿಸಿದೆ ಎಂದು ಹೇಳಿದ್ದಾರೆ.

ಈ ಬಾರಿ ಉತ್ಸವದಲ್ಲಿ ವೇದಿಕೆ ಕಾರ್ಯಕ್ರಮಗಳು ಇರುವುದಿಲ್ಲ ಬದಲಾಗಿ
ನ.13ರಂದು ಸಂಜೆ ಹಂಪಿಯ ಉದ್ದಾನ ವೀರಭದ್ರೇಶ್ವರ ದೇವಸ್ಥಾನದಿಂದ ವಿರೂಪಾಕ್ಷ ದೇವಸ್ಥಾನದ ವರೆಗೆ ಜನಪದ ಕಲಾ ತಂಡಗಳೊಂದಿಗೆ ವಿರೂಪಾಕ್ಷ ದೇವರ ಮೂರ್ತಿಯ ಶೊಭಾಯಾತ್ರೆ ನಡೆಯಲಿದೆ. ಇದರಲ್ಲಿ ಜಿಲ್ಲೆಯ ಪ್ರತಿ ತಾಲ್ಲೂಕಿನಿಂದ ಎರಡೆರೆಡು ಜನಪದ ಕಲಾ ತಂಡಗಳು ಪಾಲ್ಗೊಳ್ಳಲಿವೆ. ಇದು ಮುಗಿದ ನಂತರ ವಿರೂಪಾಕ್ಷ ದೇವಸ್ಥಾನದ ಪಕ್ಷದಲ್ಲಿ ಹರಿಯುವ ತುಂಗಭದ್ರಾ ನದಿ ತಟದಲ್ಲಿ ‘ತುಂಗಾ ಆರತಿ’ ನಡೆಯಲಿದೆ ಇಷ್ಟನ್ನು ಮಾತ್ರ ನಡೆಸಲು ಸಧ್ಯಕ್ಕೆ ತೀರ್ಮಾನಿಸಿದೆ ಎಂದಿದ್ದಾರೆ.ಪ್ರತಿ ವರ್ಷದಂತೆ ಮೂರು ದಿನ ‘ಹಂಪಿ ಉತ್ಸವ’ ಆಚರಿಸಬೇಕೆಂದು ಜಿಲ್ಲೆಯ ಹಲವು ಸಂಘಟನೆಗಳು ಆಗ್ರಹಿಸಿದ್ದವು. ಆದರೆ, ಕೋವಿಡ್‌–19 ಕಾರಣಕ್ಕಾಗಿ ಒಂದು ದಿನ ಸಾಂಕೇತಿಕವಾಗಿ ಆಚರಿಸಲು ತೀರ್ಮಾನ ತೆಗೆದುಕೊಂಡಿದೆ.