ನ. 12 ರಂದು ಎನ್.ಪಿ.ಎಸ್. ಘಟಕದಿಂದ ವಿಡಿಯೋ ಕಾನ್ಫ್‍ರೆನ್ಸ್

ಕಲಬುರಗಿ.ನ.7:ಜಿಲ್ಲೆಯಲ್ಲಿ ಎನ್.ಪಿ.ಎಸ್. ಬ್ಯಾಕ್‍ಲಾಗ್‍ಗೆ ಸಂಬಂಧಿಸಿದಂತೆ ಶೆಡ್ಯೂಲ IV ಆ್ಯಂಡ್ V ಜನರೇಟ್ ಮಾಡುವಲ್ಲಿ ಡಿ.ಡಿ.ಓ. ಗಳಿಗೆ ಹಲವಾರು ತಾಂತ್ರಿಕ ಸಮಸ್ಯೆಗಳು ಕಂಡುಬರುತ್ತಿದೆ. ಇದರ ಪರಿಹಾರಕ್ಕಾಗಿ ನಿರ್ದೇಶನಾಲಯ ಎನ್.ಪಿ.ಎಸ್. ಘಟಕದಿಂದ ರಾಜ್ಯಾದಂತಹ ಜಿಲ್ಲಾಧಿಕಾರಿಗಳ ಕಾರ್ಯಾಲಯಗಳಲ್ಲಿ (ಆಯಾ ಜಿಲ್ಲಾ ಕೇಂದ್ರಗಳಲ್ಲಿ) ರ ನ. 12 ರಂದು ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆಯವರೆಗೆ ವಿಡಿಯೋ ಕಾನ್ಫ್‍ರೆನ್ಸ್ ಆಯೋಜಿಸಲಾಗಿದೆ ಎಂದು ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಇಲಾಖೆಯ ಕಲಬುರಗಿ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಶಿಕ್ಷಣ ಇಲಾಖೆಯ ಎಲ್ಲಾ ಬಿ.ಓ. ಗಳು ಮತ್ತು ಡಿ.ಡಿ.ಪಿ.ಐ., ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಧಿಕಾರಿಗಳು, ಪೋಲಿಸ್, ಕಂದಾಯ, ಅರಣ್ಯ ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆಗಳ ಡಿ.ಡಿ.ಓ. ಗಳು ಖುದ್ದಾಗಿ ತಮ್ಮ ಕಚೇರಿಯ ಎನ್.ಪಿ.ಎಸ್. ಗೆ ಸಂಬಂಧಿಸಿದ ವಿಷಯ ನಿರ್ವಾಹಕರೊಂದಿಗೆ ಕಡ್ಡಾಯವಾಗಿ ಈ ವಿಡಿಯೋ ಕಾನ್ಫ್‍ರೆನ್ಸ್‍ಗೆ ಹಾಜರಾಗಬೇಕೆಂದು ಅವರು ತಿಳಿಸಿದ್ದಾರೆ.