ನ.11 ವಿಚಾರಣೆಗೆ ಹಾಜರಾಗಲು ನಟ ಅರ್ಜುನ್ ಗೆ ಎನ್ ಸಿಬಿ ಸೂಚನೆ

ಮುಂಬೈ ನ 9-ಈ ತಿಂಗಳ 10ರಂದು ವಿಚಾರಣೆಗೆ ಹಾಜರಾಗುವಂತೆ ಬಾಲಿವುಡ್ ನಟ‌‌‌ ಅರ್ಜುನ್‌ ರಾಮ್ ಪಾಲ್ ಅವರಿಗೆ ಮಾದಕ ದ್ರವ್ಯ ನಿಯಂತ್ರಣ ಅಧಿಕಾರಿಗಳು ಸೂಚಿಸಿದ್ದಾರೆ.
ಮುಂಬೈ ನಲ್ಲಿರುವ ರಾಮ್ ಪಾಲ್ ಅವರ ನಿವಾಸದ ಮೇಲೆ ಎನ್ ಸಿಬಿ ಅಧಿಕಾರಿಗಳು ಇಂದು ದಾಳಿ ನಡೆಸಿದ್ದರು.

ಈ ವೇಳೆ ರಾಮ್ ಪಾಲ್ ಅವರಿಗೆ ಸೇರಿದ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎನ್ ಸಿಬಿ ಮೂಲಗಳು ತಿಳಿಸಿವೆ.
ನಟ ರಾಮ್ ಪಾಲದ ಅವರ ನಿವಾಸದ ಮೇಲೆ‌ ದಾಳಿ ನಡೆಸುವ ಮುನ್ನ ನಟನ ಸ್ನೇಹಿತೆ ಗ್ಯಾಬ್ರಿಯಾಲಾ ಸಹೋದರನ ನಿವಾಸದ ಮೇಲೂ ಎಸಿಬಿ ದಾಳಿ ನಡೆಸಿತ್ರು
ಬಾಲಿವುಡ್ ನಿರ್ಮಾಪಕ ಫಿರೋಜ್ ನಾಡಿಯಾಡ್ವಾಲ ಅವರ ನಿವಾಸದ ಮೇಲೂ ಎನ್ ಸಿಬಿ ದಾಳಿ ಮಾಡಿತ್ತು.