ನ.11 ರಿಂದ ರಾಜ್ಯಮಟ್ಟದ ಮುಕ್ತ ಟೆನ್ನಿಸ್ ಪಂದ್ಯಾವಳಿ

ಬೈಲಹೊಂಗಲ,ನ5: ಬೈಲಹೊಂಗಲ ಟೆನ್ನಿಸ್ ಅಸೋಸಿಯೇಷನ್ ಆಶ್ರಯದಲ್ಲಿ ನವಂಬರ್ 11, 12 ಹಾಗೂ 13 ರಂದು ವಿಜಯ ಸೋಷಿಯಲ್ ಕ್ಲಬ್ ಆವರಣದಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ ಮುಕ್ತ ಟೆನ್ನಿಸ್ ಪಂದ್ಯಾವಳಿ ಜರುಗಲಿವೆ ಎಂದು ಅಸೋಸಿಯೇಷನ್ ಅಧ್ಯಕ್ಷ ಗಂಗಾಧರ ರಾಮನ್ನವರ, ಉದ್ಯಮಿ ವಿಜಯ ಮೆಟಗುಡ್ಡ ತಿಳಿಸಿದರು.
ಪಟ್ಟಣದ ಹೊಸೂರು ರಸ್ತೆಯಲ್ಲಿನ ವಿಜಯ ಸೋಷಿಯಲ್ ಕ್ಲಬ್ ಟೆನ್ನಿಸ್ ಮೈದಾನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮೂರು ದಿನಗಳ ಕಾಲ ನಡೆಯಲಿರುವ ರಾಜ್ಯಮಟ್ಟದ ಟೆನ್ನಿಸ್ ಪಂದ್ಯಾವಳಿ ಗಳು ಹೊನಲು ಬೆಳಕಿನ ಪಂದ್ಯಗಳಾಗಿದ್ದು,ಇಲ್ಲಿ ನಡೆಯುವ ರಾಜ್ಯಮಟ್ಟದ ಟೆನ್ನಿಸ್ ಪಂದ್ಯಾವಳಿ
ಪ್ರಪ್ರಥಮ ಬಾರಿಗೆ ಜರುಗುವುದು.
ಈ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಭಾಗಗಳಾದ ಬೆಳಗಾವಿ,ಬೀದರ್,ಗೋಕಾಕ್,ದಾವಣಗೆರೆ, ಬೆಂಗಳೂರು, ಚಿತ್ರದುರ್ಗ, ಧಾರವಾಡ, ಹುಬ್ಬಳ್ಳಿ, ಯಾದಗಿರಿ, ಕೊಪ್ಪಳ, ಲಿಂಗಸುಗೂರು, ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಅಂತರರಾಜ್ಯ ಗಳಾದ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ ರಾಜ್ಯಗಳಿಂದ ಆಟಗಾರರು ಆಗಮಿಸುತ್ತಿದ್ದು,ಸುಮಾರು 400 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಆಟಗಾರರು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ರಾಜ್ಯಮಟ್ಟದ ಟೆನ್ನಿಸ್ ಪಂದ್ಯಾವಳಿಗೆ ಮೈದಾನಗಳು ಸಕಲ ಸಿದ್ಧತೆಗೊಂಡಿದ್ದು, ಹೊಸೂರು ರಸ್ತೆಯಲ್ಲಿನ ವಿಜಯ ಸೋಷಿಯಲ್ ಕ್ಲಬ್ ನ ಟೆನ್ನಿಸ್ ಮೈದಾನದಲ್ಲಿ ಎರಡು ಟೆನ್ನಿಸ್ ಕೋಟ ಮತ್ತು ಮುರಗೋಡ ರಸ್ತೆಯಲ್ಲಿನ ಕಲ್ಪವೃಕ್ಷ ಮಾಡೆಲ್ ಸ್ಕೂಲ್ ನಲ್ಲಿ ಎರಡು ಅಂತರ ರಾಷ್ಟ್ರೀಯ ಮಟ್ಟದ ಟೆನ್ನಿಸ್ ಮೈದಾನಗಳನ್ನು ಸಜ್ಜುಗೊಳಿಸಲಾಗಿದೆ ಮತ್ತು ಕ್ರೀಡಾಪಟುಗಳಿಗೆ ಸಕಲ ವ್ಯವಸ್ಥೆ ಮಾಡಲಾಗಿದೆ.
ಮುಕ್ತ ಟೆನ್ನಿಸ್ ಪಂದ್ಯಾವಳಿಯಲ್ಲಿ 35,ರಿಂದ 45 ಹಾಗೂ 60 ವಯೋಮಿತಿಯ ಆಟಗಾರರಲ್ಲದೇ ಯುವ ಆಟಗಾರರು ಭಾಗವಹಿಸುತ್ತಿರುವುದು ವಿಶೇಷವಾಗಿದೆ ಹಾಗೂ ಪಂದ್ಯಾವಳಿ ವೀಕ್ಷಣೆಗೆ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದರು.
ಡಾ.ಮಹಾಂತೇಶ ಗದಗ, ನಾಗರಾಜ ಮಹಾಂತಶೆಟ್ಟಿ, ಶಿವಯೋಗಿ ಹರಕುಣಿ ಮಾತನಾಡಿದರು.
ಟೆನ್ನಿಸ್ ಪಟುಗಳಾದ ಉಳವಪ್ಪ ಸಾತೇನಹಳ್ಳಿ, ಮಹೇಶ ತಿಗಡಿ,ರವಿ ತುರಮರಿ, ಎಂ.ಬಿ ಹಿರೇಮಠ,ಸುನೀಲ ತುಳಜನ್ನವರ,ವಿನಯ ಬೋಳನ್ನವರ,ಆನಂದ ಹಿರೇಮಠ,ಸಂಭೂ ಹೂಲಿ, ಡಾ. ತೌಸಿಫ್ ಸಂಗೋಳ್ಳಿ,ವಿನಯ ಪರಿಟ್,ಸಾಗರ ಯರಗಟ್ಟಿ,ರಾಜು ಬಡ್ಲಿ,ಸಂತೋಷ ಕೂಡಸೋಮಣ್ಣವರ,ರವಿರಾಜ್ ಇನಾಮದಾರ,ಯುವ ಕ್ರೀಡಾ ಪಟುಗಳಾದ
ಪ್ರಥಮ ತುರಮರಿ, ಪ್ರೀತಮ ಬೆಳಗಾವಿ,ಸಮೀರ್ ಮಕಾನದಾರ ಉಪಸ್ಥಿತರಿದ್ದರು.