ನ.11 ರಿಂದ ಚಳಿಗಾಲದ ರೇಸ್‍ಗಳ ಆರಂಭ: ನಿತ್ಯಾನಂದರಾವ್

ಮೈಸೂರು, ನ. 9- ಮೈಸೂರಿನಲ್ಲಿ 2020-21ನೇ ಸಾಲಿನ ಚಳಿಗಾಲದ ರೇಸ್‍ಗಳು ನ. 11 ರಿಂದ ಆರಂಭವಾಗಲಿವೆ ಎಂದು ಮೈಸೂರು ರೇಸ್ ಕ್ಲಬ್ ಅಧ್ಯಕ್ಷ ಡಾ. ಎನ್. ನಿತ್ಯಾನಂದರಾವ್ ತಿಳಿಸಿದರು.
ಅವರು ಇಂದು ಬೆಳಿಗ್ಗೆ ನಗರದ ರೇಸ್‍ಕೋರ್ಸ್ ಆವರಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಈ ಸಾಲಿನ ಚಳಿಗಾಲದ ರೇಸ್‍ಗಳು ನ. 11 ರಿಂದ ಆರಂಭಗೊಂಡು ಡಿ. 16ಕ್ಕೆ ಮುಕ್ತಾಯಗೊಳ್ಳಲಿದೆ ಎಂದರು.
ಸದರಿ ಅವಧಿಯಲ್ಲಿ ನ. 11, ನ. 18 ಹಾಗೂ ನ. 25 ರಂದು, ಡಿಸೆಂಬರ್ ಮಾಹೆಯ 2, 9 ಹಾಗೂ 16 ರಂದು ಒಟ್ಟು 6 ದಿನಗಳು ನಡೆಯಲಿದ್ದು, ಇದರಲ್ಲಿ 400ಕ್ಕೂ ಹೆಚ್ಚು ಕುದುರೆಗಳು ಭಾಗವಹಿಸಲಿವೆ. 20 ಮಂದಿ ತರಬೇತುದಾರರು ಇರುವರು. ಈ ಬಾರಿ 70.20 ಲಕ್ಷ ಸ್ಟೇಕ್ ಇರುತ್ತದೆ ಎಂದು ಅವರು ಹೇಳಿದರು.
ಆನ್‍ಲೈನ್ ಬೆಟ್ಟಿಂಗ್: ಮೈಸೂರು ರೇಸ್‍ಕ್ಲಬ್ ದೇಶದಲ್ಲೇ ಮೊದಲು
ಈ ಬಾರಿ ರಾಜ್ಯ ಸರ್ಕಾರ ಕುದುರೆ ಪಂದ್ಯಾವಳಿಗೆ ಆನ್‍ಲೈನ್ ಮೂಲಕ ಬೆಟ್ಟಿಂಗ್‍ಗೆ ಅನುಮತಿ ನೀಡಿದ್ದು, ಅದರಂತೆ ದೇಶದಲ್ಲೇ ಮೊದಲ ಆನ್‍ಲೈನ್ ಬೆಟ್ಟಿಂಗ್ ಮೈಸೂರು ರೇಸ್‍ಕೋರ್ಸ್ ಪ್ರಥಮ ಸ್ಥಾನ ಗಳಿಸಿರುವುದು ಬಹಳ ಹೆಮ್ಮೆಯ ಸಂಗತಿ. ಇದೇ ರೀತಿಯ ಸೌಲಭ್ಯವನ್ನು ಬೆಂಗಳೂರು, ಹೈದರಾಬಾದ್ ಮತ್ತು ಕೊಲ್ಕತ್ತಾ ರೇಸ್‍ಕ್ಲಬ್‍ಗಳು ನಂತರದ ಸ್ಥಾನವನ್ನು ಪಡೆದಿವೆ ಎಂದು ಹೇಳಿದರು. ಮೈಸೂರು ರೇಸ್‍ಕ್ಲಬ್‍ಗೆ ಆನ್‍ಲೈನ್ ಬೆಟ್ಟಿಂಗ್‍ಗೆ ಸರ್ಕಾರ ಅನುಮತಿ ನೀಡಿರುವುದಕ್ಕೆ ರಾಜ್ಯ ಸರ್ಕಾರಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ ಎಂದರು.
ನಮ್ಮ ರೇಸ್‍ಕೋರ್ಸ್‍ನಲ್ಲಿ ಆನ್‍ಲೈನ್ ಬೆಟ್ಟಿಂಗ್ ಪೆÇೀರ್ಟಲ್ ಲಿಂಕ್, ನಮ್ಮ ವೆಬ್‍ಸೈಟ್‍ನಲ್ಲಿ (ತಿತಿತಿ.mಥಿsoಡಿeಡಿಚಿಛಿeಛಿಟub.ಛಿom) ಲಭ್ಯವಿರುತ್ತದೆ. ಈ ಆನ್‍ಲೈನ್ ಬೆಟ್ಟಿಂಗ್ ಪೆÇೀರ್ಟಲ್‍ನ ವ್ಯವಹಾರ ನಡೆಸುವುದು ಬಹಳ ಸುಲಭ ಹಾಗೂ ಸರಳವಾಗಿದೆ. “ ಮಾಸ್ ಅಲೈ” ಎಂಬ ಸಂಸ್ಥೆಯೊಂದಿಗೆ ಈ ವ್ಯವಹಾರವನ್ನು ಅಭಿವೃದ್ಧಿಪಡಿಸಲಾಗಿದೆ. ಈ ಆನ್‍ಲೈನ್ ಸೌಲಭ್ಯವನ್ನು ರೇಸ್‍ಗಾರರು ರೇಸ್‍ಕೋರ್ಸ್‍ಗೆ ಬರದೆ ತಾವು ಇರುವ ಸ್ಥಳದಿಂದಲೇ ಬೆಟ್ಟಿಂಗ್ ನಡೆಸಬಹುದಾಗಿದೆ. ಪೆÇೀರ್ಟಲ್ ಅಂಡ್ ಆಂಡ್ರ್ಯಾಡ್/ಐಓಎಸ್ ಪ್ಲಾಟ್‍ಫಾರಂ ಈ ವೆಬ್‍ನಲ್ಲಿ ಲಭ್ಯವಿದೆ.
ಆರಂಭದಲ್ಲಿ ಕರ್ನಾಟಕದ ಜನರಿಗೆ ಮಾತ್ರ ಈ ಸೌಲಭ್ಯ ಲಭ್ಯವಿದ್ದು, ಬಳಕೆದಾರು ತಮ್ಮನ್ನು ಪೆÇೀರ್ಟಲ್‍ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊ: 9606036015, 9606036016, 9606036017, 9606036018, 9606036019 ಅನ್ನು ಸಂಪರ್ಕಿಸಬಹುದು ಎಂದು ವಿವರ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮೈಸೂರು ರೇಸ್‍ಕೋರ್ಸ್‍ನ ಕಾರ್ಯದರ್ಶಿ (ಪ್ರಭಾರ) ಡಾ. ಎಂ.ಆರ್. ಜಗನ್ನಾಥ್, ಸಮಿತಿಯ ಸದಸ್ಯರುಗಳಾದ ಎಂ.ಪಿ. ಮಲ್ಲಿಕಾರ್ಜುನ, ಸಿ.ಎನ್. ಕಾರ್ಯಪ್ಪ, ಹೆಚ್.ಕೆ. ರಮೇಶ್, ಸುವರ್ಡ್‍ಗಳಾದ ವೈ.ಟಿ. ಉದಯಶಂಕರ್, ಮಹೇಶ್, ಟಿ.ಯು. ಚಂಗಪ್ಪ, ಆನ್‍ಲೈನ್ ಬೆಟ್ಟಿಂಗ್ ಅಧ್ಯಕ್ಷ ಸಂತೋಷ್ ಕಾರ್ಯಪ್ಪ ಉಪಸ್ಥಿತರಿದ್ದರು.