ನ. 11 ರಂದು ವೀರರಾಣಿ ಒನಕೆ ಓಬವ್ವ ಜಯಂತಿ ಆಚರಣೆ

ಕಲಬುರಗಿ,ನ.04: ನವೆಂಬರ್ 11 ರಂದು ವೀರರಾಣಿ ಒನಕೆ ಓಬವ್ವ ಜಯಂತಿ ಆಚರಣೆಯನ್ನು ಅದ್ದೂರಿಯಾಗಿ ಆಚರಿಸಲು ಸಭೆಯಲ್ಲಿ ನಿರ್ಧಾರಿಸಲಾಯಿತು.
ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಮಾಜ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿ, ನವೆಂಬರ್ 11 ಕ್ಕೆ ವೀರರಾಣಿ ಒನಕೆ ಓಬವ್ವ ಜಯಂತಿ ಆಚರಿಸಲು ಸಭೆಯ ಮುಖಂಡರು ನಿರ್ಧರಿಸರಿದ್ದಾರೆ.
ಅಂದು ಬೆಳಿಗ್ಗೆ 11.00 ಗಂಟೆಗೆ ನಡೆಯುವ ಕಾರ್ಯಕ್ರಮಕ್ಕೆ ಡಾ.ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಅಧಿಕಾರಿಗಳು ತಮಗೆ ನೀಡಿದ ಕೆಲಸಗಳನ್ನು ಕಟ್ಟುನಿಟ್ಟಾಗಿ ಪಾಸಲಿಸಬೇಕೆಂದು ಜಿಲ್ಲಾಡಳಿತದ ಶಿಷ್ಠಾಚಾರದ ತಹಶೀಲ್ದಾರ ಸೈಯದ್ ನಿಸಾರ್ ಅಹ್ಮದ್ ಅವರು ಅಧಿಕಾರಿಗಳಿಗೆ ಸೂಚಿಸಿದರು. ವೇದಿಕೆ ಒಬ್ಬ ಸಮಿತಿ ಅಧ್ಯಕ್ಷರನ್ನು ಹಾಗೂ ಉಪನ್ಯಾಸಕರನ್ನು ನೇಮಕ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು ಅವರು ಮಾತನಾಡಿ, ಸಂಗೀತ ಕಾರ್ಯಕ್ರಮಗಳು ಜರುಗಲಿವೆ. ವೇದಿಕೆ ಅಲಂಕಾರ ಮಾಡಲಾಗುವುದು ಆಮಂತ್ರಣ ಪತ್ರಗಳು ಮುದ್ರಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.
ಅಂದು ನಡೆಯುವ ಜಯಂತಿ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಸರಕಾರಿ ಅರೆ ಸರಕಾರಿ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ತಾಲೂಕು ಕಚೇರಿಗಳಲ್ಲಿ ಬೆಳಿಗ್ಗೆ 9 ಗಂಟೆ ಜಯಂತಿಯನ್ನು ಆಚರಿಸಬೇಕೆಂದರು.
ಕುಡಿಯುವ ನೀರು ಸ್ಪಚ್ಫತೆ ಕಾಪಾಡಿಕೊಂಡು ಹೋಗಲು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಸಮಾಜ ಮುಖಂಡರುಗಳು ತಮ್ಮ ಸಲಹೆ ಸೂಚನೆ ನೀಡಿದರು.
ಸಭೆಯಲ್ಲಿ ಸಮಾಜ ಮುಖಂಡರು ತಮ್ಮ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು. ದೇವಿಂದ್ರ ಎಸ್. ಸಿನ್ನೂರ, ಜಿಲ್ಲಾ ಖಜಾಂಚಿ ದಿನೇಶ ಎನ್. ದೊಡ್ಡಮನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾದೇವ ಮೋಘಾ, ಜಿಲ್ಲಾ ಗೌರವಾಧ್ಯಕ್ಷರಾದ ರಾಜಕುಮಾರ ಕಪನೂರ ಎಸ್‍ಸಿ/ಎಸ್‍ಟಿ ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮಹಿಳೆಯರು ಭಾಗವಹಿಸ್ದರು.