ನ. 10 ಹಾಗೂ 11 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ.ನ.08:ಕಲಬುರಗಿ ನಗರಕ್ಕೆ ಇದೇ ನವೆಂಬರ್ 10 ಹಾಗೂ 11 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ನಗರದ ಸಾರ್ವಜನಿಕರು ಜಲಮಂಡಳಿಯೊಂದಿಗೆ ಸಹಕರಿಸಬೇಕೆಂದು ಕಲಬುರಗಿ ಪಿ.ಐ.ಯು, ಕೆ.ಯು.ಐ.ಡಿ.ಎಫ್.ಸಿ.-ಕೆ.ಯು.ಡಬ್ಲ್ಯು.ಎಸ್.ಎಂ.ಪಿ. ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ಕಲಬುರಗಿ ನಗರಕ್ಕೆ ನೀರು ಸರಬರಾಜಾಗುವ ಸರಡಗಿಯ ಭೀಮಾ ನದಿ ಮೂಲ ಸ್ಥಾವರ, ಕೋಟನೂರದಲ್ಲಿನ ಮಧ್ಯಂತರ ಪಂಪಿನ ಮನೆಯ ಕೊಳವೆಗಳಲ್ಲಿ ಹಾಗೂ ಮೂಲಸ್ಥಾವರದಿಂದ ಮಧ್ಯಂತರ ಪಂಪಿನ ಮನೆಯವರೆಗೆ ಅವಳವಡಿಸಲಾಗಿರುವ 1118 ಮಿ.ಮೀ. ವ್ಯಾಸದ ಏರು ಕೊಳವೆ ಮಾರ್ಗಕ್ಕೆ ಸಿರನೂರು ಬಳಿ ಅಳವಡಿಸಲಾಗಿರುವ ಕೊಳವೆಯಲ್ಲಿ ಸೋರುವಿಕೆ ಕಂಡು ಬಂದಿದ್ದು, ಇದರ ತುರ್ತು ದುರಸ್ಥಿ ಕಾರ್ಯ ಕೈಗೆತ್ತಿ ಕೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಮೇಲ್ಕಂಡ ದಿನದಂದು ಕಲಬುರಗಿ ನಗರಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಅವರು ತಿಳಿಸಿದ್ದಾರೆ.