ನ.1 ರಂದು ದಸರಾ ಲೆಕ್ಕ ಕೊಡುವೆ : ಎಸ್‍ಟಿಎಸ್

ಮೈಸೂರು,ಅ.27: ದಸರಾ ಯಶಸ್ಸಿಗೆ ಸಹಕರಿಸಿದ ಮೈಸೂರಿನ ಜನತೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಧನ್ಯವಾದ ತಿಳಿಸಿದರು.
ದಸರಾ ಮಹೋತ್ಸವ-2020 ಯಶಸ್ವಿಯಾದ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸರ್ಕಾರಿ ಅತಿಥಿಗೃಹದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿ ದಸರಾ ಯಶಸ್ಸಿಗೆ ಸಹಕರಿಸಿದ ಮೈಸೂರಿನ ಜನತೆಗೆ ಧನ್ಯವಾದ ತಿಳಿಸಿದರು. ಕೊರೋನಾ ವಾರಿಯರ್ಸ್ ನಿಂದ ದಸರಾ ಉದ್ಘಾಟನೆಯಾಗಿದ್ದು ಐತಿಹಾಸಿಕ ಸಂಗತಿ. ಜಿಲ್ಲಾಡಳಿತ ಹಾಗೂ ಪೆÇಲೀಸ್ ಇಲಾಖೆಯ ಅತ್ಯಂತ ಉತ್ತಮ ರೀತಿಯಲ್ಲಿ ಕಾರ್ಯಹಿಸಿವೆ. ಸ್ಥಳೀಯ ಶಾಸಕರಾದ ಎಲ್.ನಾಗೇಂದ್ರ, ಎಸ್.ಎ.ರಾಮದಾಸ್, ಎಂ.ಪಿ ಪ್ರತಾಪ್ ಸಿಂಹ ಎಲ್ಲರೂ ಸಹಕಾರ ನೀಡಿದ್ದಾರೆ. ಮುಖ್ಯಮಂತ್ರಿಗಳು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಿ ನಾಡಿಗೆ ಶುಭ ಸಂದೇಶ ನೀಡಿದ್ದಾರೆ. ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
ಸರಳ ಸಾಂಪ್ರದಾಯಿಕ ದಸರಾ ಯಶಸ್ವಿಯಾಗಿದೆ. ಮೊದಲಿಗೆ ಮಾಧ್ಯಮ ದವರಿಗೆ ಅಭಿನಂದನೆ ಸಲ್ಲಿಸುತ್ತೇವೆ. 9 ದಿನದ ಕಾರ್ಯಕ್ರಮ ಯಶಸ್ವಿಯಾಗಿದೆ. ಟೆಕ್ನಿಕಲ್ ಕಮಿಟಿ ಸೂಚನೆ ಯಶಸ್ವಿಯಾಗಿದೆ. ಜಂಬೂಸವಾರಿಗೆ ಎಷ್ಟೋ ಜನರಿಗೆ ಬರೋದು ಬೇಡ ಅಂತ ಹೇಳಿದ್ವಿ. ಅದರಂತೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಪುಷ್ಪಾರ್ಚನೆ ಮೂಲಕ ಯಶಸ್ವಿಯಾಗಿ ನೆರವೇರಿತು. ನಾನು ದಸರಾಗೆ ಹೊಸಬ,ಮೊದಲ ದಿನದಿಂದಲೂ ಸಾರ್ವಜನಿಕರು, ಸಂಸದರು,ಶಾಸಕರ ಸಹಕಾರ ಚೆನ್ನಾಗಿತ್ತು. ಆದ್ದರಿಂದ ಈ ಬಾರಿಯ ದಸರಾ ಯಶಸ್ಸಿಗೆ ಕಾರಣರಾದ ಇವೆರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
7 ಲಕ್ಷಕ್ಕೂ ಅಧಿಕ ಜನ ದಸರಾ ವೀಕ್ಷಿಸಿ ಯಶಸ್ಸಿಗೆ ಕಾರಣರಾಗಿದ್ದಾರೆ. ಸರ್ಕಾರ ಬಿಡುಗಡೆ ಮಾಡಿರುವ ಲೆಕ್ಕ ವನ್ನು ನವಂಬರ್ 1ರಂದು ನೀಡಲಿದ್ದೇವೆ. ಈ ಬಗ್ಗೆ ಜಿಲ್ಲಾಡಳಿತಕ್ಕೂ ಮಾಹಿತಿ ನೀಡುವಂತೆ ತಿಳಿಸಿದ್ದೇನೆ ಎಂದರು.
ಸಾರ್ವಜನಿಕವಾಗೇ ದಸರಾ ಲೆಕ್ಕ ಬಿಡುಗಡೆ ಮಾಡುತ್ತೇವೆ. ದಸರಾಗೆ ಸರ್ಕಾರದಿಂದ 10 ಕೋಟಿ ಬಿಡುಗಡೆ ಮಾಡಲಾಗಿತ್ತು. ಕಳೆದ ಬಾರಿಯ ಉಳಿಕೆ ಹಣವನ್ನು ರಾಜ್ಯಕಾರ್ಯದರ್ಶಿಗಳ ಗಮನಕ್ಕೆ ತಂದಿದ್ದೇನೆ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಉಳಿಕೆ ಹಣಕ್ಕೆ ನಾನು ಜವಾಬ್ದಾರಿ. ನಗರದ ಲೈಟಿಂಗ್‍ನ ನಾಳೆಯಿಂದ ತೆರವುಗೊಳಿಸಲಾಗುತ್ತದೆ. ಮುಖ್ಯ ಆಯ್ದ ಭಾಗಗಳಲ್ಲಿ ಮಾತ್ರ ಕನ್ನಡ ರಾಜೋತ್ಸವದ ವರೆಗೂ ದೀಪಾಲಂಕಾರ ಮುಂದುವರೆಯಲಿದೆ. ಈ ಬಗ್ಗೆ ಅಧಿಕಾರಿಗಳಿಗೂ ಸೂಚನೆ ನೀಡಿದ್ದೇನೆ ಎಂದರು.
ಆರ್.ಆರ್. ನಗರದಲ್ಲಿ ನ.3 ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಮತದಾರರಿಗೆ ಸೆಟ್‍ಅಪ್ ಬಾಕ್ಸ್ ನೀಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ನವರ ಹೇಳಿಕೆಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಪ್ರತಿಕ್ರಿಯಿಸಿ ಮುನಿರತ್ನ ರವರು ನಾಲ್ಕಾರು ವರ್ಷಗಳಿಂದ ಕೇಬಲ್ ವ್ಯವಹಾರ ನಡೆಸುತ್ತಿದ್ದಾರೆ. ಹಾಗಾಗಿ ಅವರು ಸೆಟ್ ಅಪ್ ಬಾಕ್ಸ್ ಅನ್ನು ನೀಡಿರಬಹುದು. ಸೆಟ್ ಅಪ್ ಬಾಕ್ಸ್ ಕೊಟ್ಟರೆ ತಪ್ಪೇನು? ಒಂದು ವೇಳೆ ಅವರು ಮತದಾರರಿಗೆ ಸೆಟ್ ಅಪ್ ಬಾಕ್ಸ್ ನೀಡಿದ್ದಲ್ಲಿ ಈ ಬಗ್ಗೆ ಚುನಾವಣೆ ಆಯೋಗ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಿದೆ ಎಂದರು.
ಬಿಜೆಪಿಯವರಿಗೆ ಧಮ್ ಇದೆಯೇ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಸೋಮಶೇಖರ್ ಪ್ರತಿಕ್ರಿಯಿಸಿ ಸಿದ್ದರಾಮಯ್ಯನವರ ಆಡಳಿತ ಏನು ಎಂಬುದನ್ನು ನಾನು ಬಲ್ಲೆ. ಅವರು ಸದನದ ಹೊರಗೊಂದು – ಒಳಗೊಂದು ಮಾತನಾಡುತ್ತಾರೆ. ನಾನು ಸಹ ಅವರೊಂದಿಗೆ 5 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಹೀಗಿದ್ದರೂ ಅವರು ನಮಗೆ ಧಮ್ ಇದೆ ಎಂದು ಏಕೆ ಪರೀಕ್ಷಿಸುತ್ತಿದ್ದಾರೋ ಆ ಭಗವಂತನೇ ಬಲ್ಲ ಎಂದು ಕಿಡಿ ಕಾರಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಎಲ್ ನಾಗೇಂದ್ರ, ಎಸ್.ಎ.ರಾಮದಾಸ್, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಉಪಸ್ಥಿತರಿದ್ದರು.