ನ.೯ ವಿಶ್ವಕರ್ಮ ಸಮಾಜವನ್ನು ಎಸ್.ಟಿ ಪಟ್ಟಿಗೆ ಸೇರಿಸಲು ಆಗ್ರಹಿಸಿ ಬೃಹತ್ ರ್‍ಯಾಲಿ – ಬ್ರಹ್ಮ ಗಣೇಶ

ರಾಯಚೂರು,ನ.೪- ವಿಶ್ವಕರ್ಮ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಒತ್ತಾಯಿಸಿ ನವೆಂಬರ್ ೯ ರಂದು ಬೃಹತ್ ರ್‍ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ಬ್ರಹ್ಮ ಗಣೇಶ್ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಅಂದು ಬೆಳಿಗ್ಗೆ ೧೧ ಗಂಟೆಗೆ ನಗರದ ರೇಡಿಯೋ ಸ್ಟೇಶನ್ ಮುಂದೆ ಇರುವ ವಿಶ್ವಕರ್ಮ ವೃತ್ತಕ್ಕೆ ಪೂಜಾ ಕಾರ್ಯಕ್ರಮ ನೆರವೇರಿಸಿ ನಂತರ ರ್‍ಯಾಲಿಯು ವೀರಶೈವ ವೃತ್ತದಿಂದ ನೇತಾಜಿ ವೃತ್ತ, ತೀನ ಕಂದಿಲ್ , ಡಾ. ಬಿ.ಆರ್.ಅಂಬೇಡ್ಕರ್ ವೃತ್ತ,ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ ಎಂದರು.
ವಿಶ್ವ ಕರ್ಮ ಸಮಾಜವು ಗತಕಾಲದಿಂದಲೂ ಹಲವಾರು ಹೆಸರುವಾಸಿಯಾದ ದೇವಸ್ಥಾನಗಳನ್ನು ನಿರ್ಮಿಸಿ ಈ ನಾಡಿನ ಸಂಸ್ಕೃತಿಯನ್ನು ಎತ್ತಿ ಹಿಡಿದು ಈ ಭಾರತವನ್ನು ಭವ್ಯ ಭರತವನ್ನಾಗಿಸಿದುದಲ್ಲದೆ ಈ ದೇಶಕ್ಕೆ ೫ ಕಸಬುಗಳನ್ನು ನಿರ್ವಹಿಸಿ ಯಾವದೇ ಫಲಾಪೇಕ್ಷೆ ಇಲ್ಲದೇ ಅಪಾರ ಕೊಡುಗೆಯನ್ನು ನೀಡುತ್ತಾ ಬಂದಿದೆ.ನಾವು ಕೂಲಕಸುಬುಗಳನ್ನೇ ನಂಬಿ ಬದುಕುವ ನಮಗೆ ಈಗಿನ ಮುಂದುವರಿದ ತಾಂತ್ರಿಕತೆಗೆ ಬಲಿಯಾಗಿ ಜೀವನ ನಡೆಸಲು ಕುಲಕಸುಬುಗಳೇ ನಾಶವಾಗುವ ಪರಿಸಸ್ಥಿ ಬಂದಿದೆ ಎಂದರು.
ನವೆಂಬರ್ ೧೧,೧೨,೧೩ ರಂದು ಕೆಪಿ ನಂಜುಂಡಿಯವರ ನೇತೃತ್ವದಲ್ಲಿ ವಧು ವರರ ಸಮಾವೇಶ ನಡೆಯಲಿದೆ. ಈ ಸಮಾವೇಶಕ್ಕೆ ಜಿಲ್ಲೆಯ ಎಲ್ಲಾ ತಾಲೂಕಿನ ಗ್ರಾಮ,ಹೋಬಳಿ ಗಳಿಂದ ಸಮಾಜದ ವಧುವವರು ಈ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮಾವಿ ಮಾಡಿದರು.