ನ.೭ ಕ್ಕೆ ಮೀಸಲಾತಿಗೆ ಒತ್ತಾಯಿಸಿ ಉಪ್ಪಾರ ಸಮಾಜದಿಂದ ಕಾಲ್ನಡಿಗೆ ಜಾಥಾ

ದಾವಣಗೆರೆ.ನ.೫; ಉಪ್ಪಾರ ಸಮಾಜವನ್ನು ಪ.ಜಾತಿ ಅಥವಾ ಪ.ಪಂಗಡಕ್ಕೆ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿ ಜಿಲ್ಲಾ ಉಪ್ಪಾರ ಎಸ್.ಸಿ, ಎಸ್.ಐ ಮೀಸಲಾತಿ ಹೋರಾಟ ಸಮಿತಿಯಿಂದ ನ.೭ ರಂದು ಬೆಳಗ್ಗೆ ೧೧ ಕ್ಕೆ ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೂ ಕಾಲ್ನಡಿಗೆ ಮೂಲಕ ತೆರಳಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಲಾಗುವುದು ಎಂದು ಸಮಿತಿಯ ಜಿಲ್ಲಾಧ್ಯಕ್ಷ ಹೆಚ್.ತಿಪ್ಪಣ್ಣ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭಗೀರಥಪೀಠದ  ಶ್ರೀ ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಜಿಗಳ ನೇತೃತ್ವದಲ್ಲಿ ಉಪ್ಪಾರ ಸಮಾಜದ ಸುಮಾರು ಐದರಿಂದ ಆರು ಸಾವಿರ ಜನರು ಕಾಲ್ನಡಿಗೆ ಜಾಥಾ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಿದ್ದೇವೆ ಎಂದರು.ಉಪ್ಪಾರ ಸಮಾಜವು ಸಾಮಾಜಿಕವಾಗಿ, ಧಾರ್ಮಿಕವಾಗಿ ಶೈಕ್ಷಣಿಕವಾಗಿ, ರಾಜಕೀಯವಾಗಿ, ಔದ್ಯೋಗಿಕವಾಗಿಯೂ ಅತೀ ಹಿಂದುಳಿದ ಸಮಾಜವಾಗಿದೆ.ರಾಜ್ಯ ಸರ್ಕಾರ ಸಂವಿಧಾನ ಬದ್ಧವಾಗಿ ಈ ಹಿಂದೆ 1978ರಲ್ಲಿ ನೇಮಿಸಿರುವ ಎಲ್.ಜಿ. ಹಾವನೂರು ಆಯೋಗದ ವರದಿ, 1986 ರಲ್ಲಿನ ವೆಂಕಟಸ್ವಾಮಿ ಆಯೋಗದ ವರದಿ, 1990 ರ ನ್ಯಾಯಮೂರ್ತಿ ಚಿನ್ನಪ್ಪರೆಡ್ಡಿ ಆಯೋಗದ ವರದಿ, ಇನ್ನೂ ಅನೇಕರು ನಮ್ಮ ಉಪ್ಪಾರ ಸಮಾಜದ ಬಗ್ಗೆ ಅಧ್ಯಯನ ನಡೆಸಿ ವರದಿಗಳನ್ನು ಸಲ್ಲಿಸಿದ್ದರೂ ಕೂಡ ಯಾವುದೇ ಸರ್ಕಾರಗಳು ನಮ್ಮ ಸಮಾಜಕ್ಕೆ ನ್ಯಾಯ ಕೊಡಿಸುವ ಪ್ರಯತ್ನ ಮಾಡಿರುವುದಿಲ್ಲ. ಇವುಗಳಲ್ಲದೇ ರಾಷ್ಟ್ರೀಯ ಹಿಂದುಳಿದ ವರ್ಗ ಆಯೋಗದ ಅಧ್ಯಕ್ಷರಾದ ಬಿ.ಪಿ. ಮಂಡಲ್ ವರದಿಗಳಿಂದ ಉಪ್ಪಾರ ಸಮಾಜವು  ಯಾವುದೇ ರಾಜಕೀಯ, ಶೈಕ್ಷಣಿಕ ಸಹಕಾರವಿಲ್ಲದೇ ಸಮಾಜ ಎಷ್ಟೇ ಒಗ್ಗಟ್ಟಾಗಿ ಪ್ರಯತ್ನಿಸಿದರೂ ಸರ್ಕಾರಿ ಅಂಕಿ ಅಂಶಗಳ ಪ್ರಕಾರ ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡಗಳ ಸಾಮಾಜಿಕ ಹಿನ್ನಲೆಗಿಂತಲೂ ಕನಿಷ್ಟವಾಗಿರುವುದು ಕಂಡು ಬಂದಿದೆ ಎಂದರು.ರಾಜ್ಯದಲ್ಲಿ ಉಪ್ಪಾರ ಸಮಾಜವು 30 ಲಕ್ಷಕ್ಕಿಂತಲೂ ಮೇಲ್ಪಟ್ಟು ಜನಸಂಖ್ಯೆ ಹೊಂದಿರುವುದು, ಈ ಸಮಾಜ ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿರುವ ಉಪ್ಪಾರ ಚರಿತಾಮೃತ ಮತ್ತು ಉಪ್ಪಾರ ಹಣತೆ” ಪುಸ್ತಕದಲ್ಲಿರುವ ಅಂಕಿ ಅಂಶಗಳು ಸ್ಪ ಷ್ಟವಾಗಿ ಈ ಉಪ್ಪಾರ ಸಮಾಜವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿನ್ನಡೆಯಲ್ಲಿರುವುದು ಸಾಕ್ಷಿ ಸಮೇತ ಗೊತ್ತಾಗಿದೆ ಈ ಹಿನ್ನೆಯಲ್ಲಿ ಸಮಾಜಕ್ಕೆ‌ ಮೀಸಲಾತಿ ನೀಡಬೇಕು ಎಂದರು.ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯೆ ಉಮಾಪ್ರಕಾಶ್,ಹನುಮಂತಪ್ಪ ಮತ್ತಿ,ಮಂಜುಳಮ್ಮ,ಭರತ್ ಮೈಲಾರ,ಹೆಚ್.ಡಿ.ಮಾರುತಿ, ಎನ್.ಬಿ ಲೋಕೇಶ್,ಹಾಲೇಶ್,ಕೆ.ಬಿ ಗಿರೀಶ್,ರಮೇಶ್, ಈಶ್ವರಪ್ಪ ಮತ್ತಿತರರಿದ್ದರು.

Attachments area