ನ.೬ ಕ್ಕೆ ಕರವೇ ಸ್ವಾಭಿಮಾನಿ ಬಣದಿಂದ ರಾಜ್ಯೋತ್ಸವ

ದಾವಣಗೆರೆ. ನ.೪;  ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದಿಂದ ನ.೬ ರಂದು ಬೆಳಗ್ಗೆ ೧೦ ಕ್ಕೆ ನಗರದ ಕುವೆಂಪು ಕನ್ನಡ ಭವನದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಮಹಿಳಾ ಘಟಕದ ನೂತನ ಅಧ್ಯಕ್ಷೆ ಕವಿತಾ ಯರಬಾಳು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಪ್ರಥಮಬಾರಿಗೆ ರಾಜ್ಯೋತ್ಸವ ಹಮ್ಮಿಕೊಳ್ಳಲಾಗಿದೆ ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ ಸಿದ್ದೇಶ್ವರ್,ಶಾಸಕರುಗಳಾದ ಶಾಮನೂರು ಶಿವಶಂಕರಪ್ಪ, ಎಸ್.ವಿ ರಾಮಚಂದ್ರ,ಜಿಲ್ಲಾಪೋಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ಮೇಯರ್ ಜಯಮ್ಮ ಗೋಪಿನಾಯ್ಕ್,ಡಿಎಸ್ ಎಸ್ ನ ಟಿ.ಬಸವರಾಜ್,ಉಮಾದೇವಿ ಹಾಗೂ ಕರವೇ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಪಿ.ಕೃಷ್ಣೇಗೌಡ ಆಗಮಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿಯಲ್ಲಿ ಕನ್ನಡಭಾಷೆಯಲ್ಲಿ ೧೨೫ ಕ್ಕೆ ೧೨೫  ಅಂಕಗಳಿಸಿದ ಬಾಪೂಜಿ ಶಾಲೆಯ ವಿದ್ಯಾರ್ಥಿನಿ ನಂದಿನಿಯವರಿಗೆ ಸನ್ಮಾನ ಮಾಡಲಾಗುವುದು. ಜಾನಪದ ಕಲಾವಿದ ಗುರಿರಾಜ್ ಹೋಸಕೋಟೆಯವರಿಂದ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ  ಸುದ್ದಿಗೋಷ್ಠಿಯಲ್ಲಿ ರವಿಕುಮಾರ್,ಆರ್.ಎಂ ಶಿವಯ್ಯ,ಗೀತಾ,ಕಾವೇರಿ ಉಪಸ್ಥಿತರಿದ್ದರು.