
ಸಿಂಧನೂರು.ನ.೨- ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜು ಗಳ ಲಾನ್ ಟೆನ್ನಿಸ್ ಪಂದ್ಯಾವಳಿಗಳು ನ.೪ ರಂದು ಎಫ್.ಆರ್.ಸಿ.ಎಸ್ ಕ್ಲಬ್ ನಲ್ಲಿ ನಡೆಯಲಿವೆ ಇವುಗಳನ್ನು ಯುವ ಸಬಲಿಕರಣ ಮತ್ತು ಕ್ರೀಡಾ ಸಚಿವರಾದ ಬಿ.ನಾಗೇಂದ್ರ ಉದ್ಘಾಟಿಸಲಿದ್ದಾರೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾ ಅಭಿಮಾನಿಗಳು, ಕ್ರೀಡಾಪಟುಗಳು, ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಲು ಅವಕಾಶವಿದೆ ಎಂದು ಆರ್.ಸಿ.ಪಾಟೀಲ ತಿಳಿಸಿದರು.
ನಗರದ ಪಾಟೀಲ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಶಿಕ್ಷಣ ಇಲಾಖೆ (ಪದವಿ ಪೂರ್ವ ) ರಾಯಚೂರು ಹಾಗೂ ಪಾಟೀಲ ಪದವಿ ಪೂರ್ವ ಕಾಲೇಜು ಮತ್ತು ಎಪ್.ಆರ್.ಸಿ.ಎಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಈ ಪಂದ್ಯಾವಳಿ ಗಳು ನಡೆಯಲಿದ್ದು ಕಾರ್ಯಕ್ರಮ ವನ್ನು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣು ಪ್ರಕಾಶ ಪಾಟೀಲ ಉದ್ಘಾಟಿಸಲಿದ್ದು, ಘನ ಉಪಸ್ಥಿತಿಯನ್ನು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ವಹಿಸಲಿದ್ದು ,ಸ್ಥಳೀಯ ಸಂಸದರು, ಶಾಸಕರು ಹಾಲಿ, ಮಾಜಿ ಜನಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡುವರು ಮತ್ತು ಕ್ರೀಡಾ ಕೋಟಾ ದಡಿಯಲ್ಲಿ ಈ ಕ್ರೀಡೆಯಲ್ಲಿ ವಿಜೇತರಾದವರಿಗೆ ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಐದು ಜನರಿಗೆ ನಿಟ್ ಮತ್ತು ಸಿ.ಇ.ಟಿ ಸೀಟು ಹಂಚಿಕೆಯಲ್ಲಿ ಪ್ರಾಶಸ್ತ್ಯ ನೀಡಲಾಗುತ್ತದೆ ಇದು ಇದರ ವಿಶೇಷ ಎಂದು ಮಾಹಿತಿ ನೀಡಿದರು.
ಪ್ರಾಚಾರ್ಯರಾದ ಶಿವರಾಜ, ಮಂಜುನಾಥ್ ಸೋಮಲಾಪುರ, ಎಂ.ವೆಂಕಟರಾವ್, ಎನ್.ನಾಗರಾಜ, ನೋಡಯ್ಯ ಸ್ವಾಮಿ,ವಿಶ್ವನಾಥ ಮಾ.ಪಾ ಶರಣೇಗೌಡ, ಜಡೆಸ್ವಾಮಿ, ಪರಶುರಾಮ ಮಲ್ಲಾಪುರ, ಸಿದ್ದಪ್ಪ ಖೈರವಾಡಗಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.