ನ.೩, ದೆಹಲಿ ಚಲೋ ಬಿತ್ತಿ ಪತ್ರ ವಿತರಣೆ

ರಾಯಚೂರು, ಆ.೦೩- ಪಿಎಫ್ ಆರ್ ಡಿಎ ಕಾಯ್ದೆ ಎನ್ ಪಿ ಎಸ್ ರದ್ದು ಸೇರಿದಂತೆ ಹಳೆ ಪಿಂಚಣಿ ಯೋಜನೆ ಮರುಸ್ಥಾಪಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿ
ನವೆಂಬರ್ ೩ ರಂದು ದೆಹಲಿಯಲ್ಲಿ ನಡೆಯುವ ಬೃಹತ್ ಪ್ರತಿಭಟನೆ ಕುರಿತು ಅಖಿಲ ಕರ್ನಾಟಕ ರಾಜ್ಯ ಸರಕಾರ ನೌಕರರ ಒಕ್ಕೂಟ ಸಮತಿ ಇಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬಿತ್ತಿ ಪತ್ರ ವಿತರಣೆ ಮಾಡಿದರು.
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನವೆಂಬರ್ ೩ ರಂದು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.
ಈ ಪ್ರತಿಭಟನೆಯಲ್ಲಿ ಸರಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ರಾಜ್ಯದಲ್ಲಿ ೭ನೇ ವೇತನ ಆಯೋಗದ ವೇತನ ಪರಿಷ್ಕರಣೆ ಶೇ. ೪೦ರಷ್ಟು ಹೆಚ್ಚಿಸಿ ಕೂಡಲೇ ಜಾರಿಗೊಳಿಸುವುದು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಹಾಗೂ ಸಾರ್ವಜನಿಕ ಉದ್ದಿಮೆಗಳಲ್ಲಿ ಖಾಲಿ ಇರುವ ೬೦ ಲ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಕೂಡಲೇ ಮಾಡುವುದು.
ರಾಜ್ಯದಲ್ಲಿ ಆಡಳಿತ ಸುಧಾರಣಾ ಆಯೋಗ-೨ರಲ್ಲಿ ನೌಕರ-ವಿರೋಧಿ ಮತ್ತು
ಸಾರ್ವಜನಿಕ ಸೇವೆಗಳ ಖಾಸಗೀಕರ ಶಿಫಾರಸ್ಸುಗಳನ್ನು ಕೈಬಿಡುವುದು.
ತಡೆಹಿಡಿದಿರುವ ೧೮ ತಿಂಗಳ ತುಟ್ಟಿಭತ್ಯೆಯನ್ನು ಕೂಡಲೇ ಬಿಡುಗಡೆ ಮಾಡುವುದು.
ಅನುಕಂಪ ಆಧಾರಿತ ಕೆಲಸ ನೀಡುವಲ್ಲಿ ಇರುವ ಎಲ್ಲ ನಿಬಂಧನೆಗಳನ್ನು ರದ್ದುಗೊಳಿಸಬೇಕು.
ರಾಜ್ಯದ ಎಲ್ಲಾ ಇಲಾಖೆಗಳಲ್ಲಿನ ಎಲ್ಲಾ ವೃಂದಗಳ ಜೇಷ್ಠತಾ ಪಟ್ಟಿ ಅಂತಿಮಗೊಳಿಸುವುದು, ಸಿ ಮತ್ತು ಆರ್ ಪರಿಷ್ಕ ಮತ್ತು ಮುಂಬಡ್ತಿ ನೀಡಲು ಕ್ರಮವಹಿಸುವುದು ಇನ್ನಿತರ ಬೇಡಿಕೆ ಆಗ್ರಹಿಸಿ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ತಿಳಿಸಿದರು.