ನ.೩: ಕನ್ನಡ ರಾಜ್ಯೋತ್ಸವ ಆಚರಣೆ

ರಾಯಚೂರು.ಅ.೩೧- ನ.೩ ರಂದು ಹರಿಜನವಾಡದ ಶ್ರೀ ಕಂಚು ಮಾರೆಮ್ಮ ದೇವಸ್ಥಾನ ಬಳಿ ೬೮ನೇ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಭುವನೇಶ್ವರ ಸೇವಾ ಸಮಿತಿ ಅಧ್ಯಕ್ಷ ತಮೇಶ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಅಂದು ಬೆಳಿಗ್ಗೆ ೯ ಗಂಟೆಗೆ ಕನ್ನಡ ಧ್ವಜಾರೋಹಣ ನಡೆಯಲಿದೆ.ತದನಂತರ ವೇದಿಕೆಯ ಉದ್ಘಾಟನೆಯನ್ನು ಪ್ರಮುಖ ವ್ಯಕ್ತಿಗಳು ಮಾಡಲಿದ್ದಾರೆ.ಕಾರ್ಯಕ್ರಮದಲ್ಲಿ ವಿವಿಧ ಗಾಯಕರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.ಆದ್ದರಿಂದ ಸಮಸ್ತ ಕನ್ನಡ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜೆ.ವಾಗಲು ನರಸಿಂಹಲು, ಪಿ.ನರಸಿಂಹಲು, ಜಿ.ಮಂಜುನಾಥ, ಜೆ.ಎಸ್.ವಿಕಾಸ್, ಎಂ.ಎಸ್.ಕೃಷ್ಣ, ಜೆ.ಗೋವಿಂದ ಇದ್ದರು.