ನ.೩೦ ಕ್ಕೆ ದಾವಣಗೆರೆ ವಿವಿಯಲ್ಲಿ ಭಗವದ್ಗೀತೆಯ ಬೆಳಕು ಕುರಿತು ವಿಚಾರಸಂಕಿರಣ

ದಾವಣಗೆರೆ. ನ.೨೩; ದಾವಣಗೆರೆ ವಿಶ್ವವಿದ್ಯಾಲಯದ ಎಂಬಿಎ ಸಭಾಂಗಣದಲ್ಲಿ ನ.೩೦ ರ ಬೆಳಗ್ಗೆ ೧೦.೩೦ ರಿಂದ ೪.೩೦ ರವರೆಗೆ ಕೊರೊನೊತ್ತರ ಮಾನಸಿಕ ಆರೋಗ್ಯ ಭಗವದ್ಗೀತೆಯ ಬೆಳಕಿನಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಭಗವದ್ಗೀತಾ ಅಭಿಯಾನ ಜಿಲ್ಲಾಸಮಿತಿಯ ಕಾರ್ಯದರ್ಶಿ ಜಯಣ್ಣ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಿರಸಿ ಸೋಂದಾ  ಸ್ವರ್ಣಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹಾಗೂ  ಶ್ರೀ ರಾಮಕೃಷ್ಣಾಶ್ರಮದ ಶ್ರೀ ಸ್ವಾಮಿ ತ್ಯಾಗೀಶ್ವರಾನಂದ ಸ್ವಾಮೀಜಿ ಸಾನಿಧ್ಯ  ವಹಿಸಲಿದ್ದಾರೆ. ದಾವಣಗೆರೆ ವಿವಿ ಕುಲಪತಿಗಳಾದ ಡಾ.ಬಿ.ಡಿ ಕುಂಬಾರ ಉದ್ಘಾಟನೆ ಮಾಡಲಿದ್ದಾರೆ.ಎಸ್ ವಿ ವೈಎ ಎಸ್ ಎ ಯೋಗ ವಿವಿಯ ವಿಶ್ರಾಂತ ಕುಲಪತಿ ಡಾ.ರಾಮಚಂದ್ರ ಭಟ್ಟ ಕೋಟೆಮನೆ ದಿಕ್ಸೂಜಿ ಭಾಷಣ ಮಾಡಲಿದ್ದಾರೆ.ನಂತರ ನಡೆಯುವ ಗೋಷ್ಠಿಯಲ್ಲಿ ಮನೋವೈದ್ಯ ಡಾ.ಕೆ.ಆರ್ ಶ್ರೀಧರ ಭಗವದ್ಗೀತೆ ಮತ್ತು ಮನಸ್ಸು ಕುರಿತು ಮಾತನಾಡಲಿದ್ದಾರೆ.ಡಾ.ಸುಶ್ರುತ ಕೊಯಮತ್ತೂರು ಯೋಗ ಯಾಗಗಳಿಂದ ರೋಗ ನಿರೋಧಕ ಶಕ್ತಿ ಕುರಿತು ಹಾಗೂ ಮಾನಸಿಕ ಸಮಸ್ಥಿತಿಗೆ ಮಾರ್ಗೋಪಾಯ ಬಗ್ಗೆ ಡಾ.ರಾಘವೇಂದ್ರ ಭಟ್ ಹಾಗೂ ಡಾ.ಬಿ.ಎನ್ ಗಂಗಾಧರ ಅವರು ಕೋರೊನಾ ಉತ್ತರಕಾಲೀನ ಮನೋದುಷ್ಪರಿಣಾಮ ಹಾಗೂ ಪರಿಹಾರೋಪಾಯ ಕುರಿತು ಮಾತನಾಡಲಿದ್ದಾರೆಂದರು.ಡಿ. 4ರಂದು  ರಾಷ್ಟೋತ್ಥಾನ ವಿದ್ಯಾಕೇಂದ್ರ ಆವರಣದಲ್ಲಿ ರಾಜ್ಯಮಟ್ಟದ ಮಹಾಸಮರ್ಪಣಾ ಸಮಾರಂಭ ಜರುಗಲಿದೆ. ಈ ಸಮಾರಂಭದಲ್ಲಿ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಶ್ರೀ ಸೊಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾದರೇಂದ್ರ ಸರಸ್ವತೀ ಮಹಾಸ್ವಾಮಿಗಳು, ಶ್ರೀ ಶ್ರೀವೇಮನಾನಂದ ಸ್ವಾಮಿಜಿ, ಶ್ರೀ ತ್ಯಾಗೀಶ್ವರಾನಂದಜೀ ಮಹಾರಾಜ್‌  ಸಾನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ  ರಾಜ್ಯಪಾಲರಾದ ಥಾವರಚಂದ ಗೆಲ್ಲೋಟ್, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇ ರಿ,  ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ. ಸಿ. ನಾಗೇಶ, ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಶಾಮನೂರು ಶಿವಶಂಕರಪ್ಪ  ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಈ ವೇಳೆ ದಾವಣಗೆರೆ ಜಿಲ್ಲೆಯ ಮತ್ತು ರಾಜ್ಯದ  ಬೇರೆ ಜಿಲ್ಲೆಯ ಸುಮಾರು 15ಸಾವಿರ ಜನ ಈ  ಉಪಸ್ಥಿತರಿದ್ದು ಏಕಸ್ವರದಲ್ಲಿ ಭಗವದ್ಗೀತೆಯನ್ನು ಪಠಿಸಲಿದ್ದಾರೆಂದರು.
ಸುದ್ದಿಗೋಷ್ಠಿಯಲ್ಲಿ‌ ಅಧ್ಯಕ್ಷ ಡಾ.ಎಸ್ ಆರ್ ಹೆಗಡೆ,ಕುಸುಮ ಶ್ರೇಷ್ಠಿ,ಶಂಭುಲಿಂಗಪ್ಪ ಉಪಸ್ಥಿತರಿದ್ದರು.