ನ.೩೦ರೊಳಗೆ ಸಲಹೆ ಸಮಿತಿ ಸಭೆ

ರಾಯಚೂರು,ನ.೨೧- ಕೃಷ್ಣಾ ಮೇಲ್ದಂಡೆ ಯೋಜನೆಯ ೨೦೨೧-೨೨ನೇ ಸಾಲಿನ ಮುಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿಯ ನಿರ್ಣಯದಂತೆ ನಾರಾಯಣಪುರ ಜಲಾಶಯದ ನಾರಾಯಣಪುರ ಬಲದಂಡೆ ಕಾಲುವೆ ಜಾಲಗಳಿಗೆ ಮುಂಗಾರು ಹಂಗಾಮಿಗೆ ಇದೇ ನ.೧೯ವರೆಗೆ ನೀರು ಪೂರೈಸಲಾಗಿದ್ದು, ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯನ್ನು ಇದೇ ನ.೩೦ರೊಳಗೆ ಜರುಗಿಸಲು ನಿರ್ಧರಿಸಲಾಗಿದೆ.
ನ.೨೦ರಿಂದ ೩೦ವರೆಗೆ ಈ ವೃತ್ತದಡಿಯಲ್ಲಿ ಬರುವ ಅಚ್ಚುಕಟ್ಟು ಪ್ರದೇಶದಲ್ಲಿ ಹಿಂಗಾರು ಹಂಗಾಮಿನ ಬಿತ್ತನೆ ಕಾರ್ಯ ಆರಂಭಿಸುತ್ತಾರೆ. ನಾರಾಯಣಪುರ ಬಲದಂಡೆ ಕಾಲುವೆಯ ವಿತರಣಾ ಕಾಲುವೆ ಸಂ:೯(ಎ), ೧೫, ೧೬, ೧೭ ಹಾಗೂ ೧೮ರ ಕಾಲುವೆಗಳ ಜಾಲಗಳ ಅಡಿಯಲ್ಲಿ ಬರುವ ರೈತಾಪಿ ವರ್ಗದವರಿಗೆ ಮನವಿ ಮಾಡುವುದೆನೆಂದರೆ, ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಅ:೨೨ರಿಂದ ಸಂಪೂರ್ಣ ಸ್ಥಗಿತವಾಗಿದ್ದು, ಹಿಂಗಾರು ಹಂಗಾಮಿಗೆ ಅವಶ್ಯವಿರುವ ನೀರಿನ ಸಂಗ್ರಹಣೆ ಜಲಾಶಯದಲ್ಲಿ ಕಳೆದ ಸಾಲಿಗೆ ಹೋಲಿಸಿದರೆ ಅಂದಾಜು ೧೮.೦೦ ಟಿ.ಎಂ.ಸಿ. ಯಷ್ಟು ನೀರಿನ ಸಂಗ್ರಹಣೆ ಕಡಿಮೆ ಇರುತ್ತದೆ.
ಅಲ್ಲದೆ ಮುಂಗಾರು ಹಂಗಾಮಿನ ಕೊನೆಯ ದಿನವಾದ ನ.೧೯ರ ಅಂತ್ಯಕ್ಕೆ ಕಳೆದ ವರ್ಷಕ್ಕೆ ಹೋಲಿಸಿದರೆ ನೀರು ಜಲಾಶಯದಲ್ಲಿ ಕಡಿಮೆ ಇರುವುದು, ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿನ ನೀರಿನ ಸಂಗ್ರಹಣೆ ಮೇರೆಗೆ ಮುಂಬರುವ ಹಿಂಗಾರು ಹಂಗಾಮಿಗೆ ೧೪ದಿನ ಚಾಲು ಹಾಗೂ ೦೮ದಿನ ಬಂದ್ ಪದ್ದತಿಯನ್ನು ಅನುಸರಿಸಿ ೪೮ದಿನಗಳಿಗೆ ನೀರನ್ನು ಪೂರೈಸಲಾಗುತ್ತದೆ.
ಜಲಾಶಯದಲ್ಲಿ ನೀರಿನ ಲಭ್ಯತೆಗೆ ಅನುಗುಣವಾಗಿ ಚಾಲು ಬಂದ್ ಪದ್ದತಿಯನ್ನು ಅನುಸರಿಸಿ ಕಡ್ಡಾಯವಾಗಿ ಲಘು ನೀರಾವರಿ ಬೆಳೆಗಳನ್ನು ಮಾತ್ರ ಬಿತ್ತನೆ ಮಾಡಲು ರೈತರಲ್ಲಿ ವಿನಂತಿಸಲಾಗಿದ್ದು, ಭತ್ತ, ಬಾಳೆ ಹಾಗೂ ಕಬ್ಬು ಬೆಳೆಯುವುದನ್ನು ಸಂಪೂರ್ಣ ನಿಶೇಧಿಸಲಾಗಿದೆ. ಹಾಗೂ ಇತರೆ ಹೆಚ್ಚು ನೀರು ಬಯಸುವ ಬೆಳೆಗಳನ್ನು ಬಿತ್ತನೆ ಮಾಡಿದರೆ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆಯು ಕಡಿಮೆ ಇರುವುದರಿಂದ ಕೃಷ್ಣಾ ಭಾಗ್ಯ ಜಲ ನಿಗಮ ಯಾವುದೆ ಜವಾಬ್ದಾರರಾಗುವುದಿಲ್ಲವೆಂದು ಈ ಮೂಲಕ ರೈತರ ಗಮನಕ್ಕೆ ತಿಳಿಸಲಾಗುತ್ತಿದೆ.
ರೈತರು ನೀರಿನ ಬಳಕೆಯಲ್ಲಿ ಮಿತವ್ಯಯ ಸಾಧಿಸಲು ಹಾಗೂ ಈ ದಿಶೆಯಲ್ಲಿ ಎಲ್ಲಾ ಜನ ಪ್ರತಿನಿಧಿಗಳು ಮತ್ತು ಎಲ್ಲಾ ರೈತ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳಿಗೆ ಸಹಕಾರ ನೀಡವಂತೆ ಕೃಷ್ಣ ಭಾಗ್ಯ ಜಲ ನಿಗಮ ನಿಮಮಿತ ನಾಯರಾಣಪುಣ ಬಲ ದಂಡೆ ಕಾಲುವೆಯ ವೃತ್ತ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.