ನ.೨೭ ಕ್ಕೆ ರಾಜ್ಯಮಟ್ಟದ ಲಾರಿ ಮಾಲೀಕರ ಸಮಾವೇಶ

ದಾವಣಗೆರೆ.ನ.೨೫: ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಎಸ್.ಪಿ.ಕಚೇರಿ ಎದುರಿನ ಶ್ರೀ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್  ಅಂಡ್ ಟ್ರಾನ್ಸ್‌ಪೋರ್ಟೇಶನ್ಸ್ ಅಸೋಸಿಯೇಷನ್ ಹಾಗೂ ದಾವಣಗೆರ ಜಿಲ್ಲಾ ಲಾರಿ ಮಾಲೀಕರ ಹಾಗೂ ಟ್ರಾನ್ಸ್‌ಪೋರ್ಟ್ ಏಜೆಂಟರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ನ. 27ರಂದು ಒಂದು ದಿನದ ರಾಜ್ಯ ಲಾರಿ ಮಾಲೀಕರ ಸಮಾವೇಶ ಆಯೋಜಿಸಲಾಗಿದೆ ಎಂದು ಸಂಘದ ರಾಜ್ಯ ಉಪಾಧ್ಯಕ್ಷ, ದಾವಣಗೆರೆ ಜಿಲ್ಲೆಯ  ಜಿಲ್ಲಾಧ್ಯಕ್ಷ ಸೈಯದ್ ಸೈಫುಲ್ಲಾ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದ ಉದ್ಘಾಟನೆಯನ್ನು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ನೆರವೇರಿಸುವರು. ಸಮಾವೇಶದ ಅಧ್ಯಕ್ಷತೆಯನ್ನು ನವದೆಹಲಿಯ ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ಸಿನ ಛೇರ್‌ಮನ್‌ ಜಿ.ಆರ್.ಷಣ್ಮುಗಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ  ಮಹಾನಗರ ಪಾಲಿಕೆಯ ಮಹಾಪೌರ ಜಯಮ್ಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಸಾರಿಗೆ ಆಯುಕ್ತರು ಎಸ್.ಮಲ್ಲಿಕಾರ್ಜುನ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಅಶೋಕ ಲೈಲೆಂಡ್ ಮ್ಯಾನೇಜರ್ ದೇವಸೇನಾಪತಿ, ಎ.ಐ.ಎಂ.ಟಿ.ಸಿ. ಉಪಾಧ್ಯಕ್ಷ ಅರವಿಂದ್ ಅಪ್ಪಾಣಿ. ಕೈಗಾರಿಕೋದ್ಯಮಿ ಎಸ್.ಎಸ್.ಗಣೇಶ್, ಸೈಯದ್ ಸೈಫುಲ್ಲಾ, ಶ್ರೀನಿವಾಸ್‌ ಹೆಬ್ಬಾರ್‌, ಉದಯ ಶಿವಕುಮಾರ್, ಸಂಗಮೇಶ್ವರ ಗೌಡ್ರು, ಆಗಮಿಸಲಿದ್ದಾರೆ ಎಂದು ಹೇಳಿದರು.ಈ ಸಮಾವೇಶದಲ್ಲಿ ಸಾರಿಗೆ ಉದ್ಯಮಕ್ಕೆ ಆಗುತ್ತಿರುವ ಮಲತಾಯಿ ಧೋರಣೆ ತಡೆಯಲು ಕೇಳಿಕೊಳ್ಳಲಾಗುವುದು. ಕಾರಣ ಸಾರಿಗೆ ಉದ್ಯಮದಿಂದ ರಾಜ್ಯ ಸರ್ಕಾರಕ್ಕೆ ಹಾಗೂ ಕೇಂದ್ರ ಸರ್ಕಾರಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬಹಳಷ್ಟು ತೆರಿಗೆ ಸಂದಾಯವಾಗುತ್ತದೆ. ಅದಕ್ಕನುಗುಣವಾಗಿ ಈ ಉದ್ಯಮಕ್ಕೆ  ಸರ್ಕಾರದಿಂದ ಯಾವುದೇ ಸಹಕಾರವಿರುವುದಿಲ್ಲ. ದಿನನಿತ್ಯ ಆಗುವ ಅಪಘಾತಗಳನ್ನ ತಡೆಯುವ ಬಗ್ಗೆ ಒಂದಷ್ಟು ಯೋಜನೆ ಹಾಕಿಕೊಂಡಿಲ್ಲ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಎಸ್ ಕೆ ಮಲ್ಲಿಕಾರ್ಜುನ್, ದಾದಾಪೀರ್, ಜಿ.ನೇತಾಜಿರಾವ್,ಚಂದ್ರಾನಾಯ್ಕ್, ಸೋಗಿ ಮುರುಗೇಶ್,ಪಿ.ಜಯಣ್ಣ ಉಪಸ್ಥಿತರಿದ್ದರು.