
ಸಂಜೆವಾಣಿ ವಾರ್ತೆ
ದಾವಣಗೆರೆ.ನ.೧೭: ಕುಕ್ಕುವಾಡದ ಶ್ರೀ ಆಂಜನೇಯ ಸೌಹಾರ್ದ ಸಹಕಾರಿ ಸಂಘ ನಿ. ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದು, ನ.೨೭ ರಂದು ಸೋಮವಾರ ಮಧ್ಯಾಹ್ನ ೧೨ ಗಂಟೆಗೆ ಕುಕ್ಕುವಾಡ ಹೊಸ ಕೊಳೇನಹಳ್ಳಿ ರಸ್ತೆಯಲ್ಲಿರುವ ಶ್ರೀ ಗದ್ದಿಗೇಶ್ವರ ದೇವಸ್ಥಾನದ ಆವರಣದಲ್ಲಿ ರಜತಮಹೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಜಿ.ಎಂ. ರುದ್ರೇಗೌಡ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂಜನೇಯ ಪತ್ತಿನ ಸಹಕಾರಿ ನಿ. ಹೆಸರಿನಲ್ಲಿ ೧೯೯೮ ದಲ್ಲಿ . ೪೧೩ ಸದಸ್ಯರ ಮೂಲಕ ಆರಂಭವಾಗಿ ಇಂದು ೮,೧೭೬ ಸದಸ್ಯರನ್ನು ಒಳಗೊಂಡಿದೆ. ೨.೪ ಕೋಟಿಗೂ ಹೆಚ್ಚು ಷೇರು ಬಂಡವಾಳ ಹೊಂದಿದೆ. ೭ ಶಾಖೆಗಳನ್ನು ಹೊಂದಿರುವ ಸಂಘವು, ಎಲ್ಲಾ ಶಾಖೆಗಳು ಲಾಭದಲ್ಲಿ ನಡೆಯುತ್ತಿದೆ. ಸಂಘವು ೫ ಕೋಟಿಗೂ ಹೆಚ್ಚು ಆಸ್ತಿಯನ್ನು ಹೊಂದಿದೆ ಎಂದರು.ನ.೨೭ ರಂದು ನಡೆಯುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಅತ್ತಿಕಟ್ಟೆ ನಂದಿಗುಡಿ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಆವರಗೊಳ್ಳ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಪುಷ್ಪಗಿರಿ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ. ಎಂದರು.ಕೇಂದ್ರ ಕಚೇರಿ ಕಟ್ಟಡವನ್ನು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಉದ್ಘಾಟಿಸಲಿದ್ದು, ಸಂಸದ ಜಿ.ಎಂ. ಸಿದ್ದೇಶ್ವರ್ ವಾಣಿಜ್ಯ ಮಳಿಗೆಗಳು, ವಸತಿ ಗೃಹವನ್ನು ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಸೇಫ್ ಲಾಕರ್ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಭಾಂಗಣಗಳನ್ನು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹಾಗೂ ಎರೆಹುಳು ಗೊಬ್ಬರ ಲೋಕಾರ್ಪಣೆಯನ್ನು ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಮಾಡಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಸಂಸ್ಥಾಪಕ ಅಧ್ಯಕ್ಷ ಜಿ.ಎಂ. ರುದ್ರಗೌಡ್ರು ವಹಿಸಲಿದ್ದಾರೆ. ಸ್ಮರಣೆ ಸಂಚಿಕೆಯನ್ನು ಜಿ. ನಂಜನಗೌಡ್ರು ಹಾಗೂ ವೆಬ್ ಸೈಟ್ ಅನ್ನು ಬಿ.ಹೆಚ್. ಕೃಷ್ಣಾರೆಡ್ಡಿ, ಎ.ಆರ್. ಪ್ರಸನ್ನ ಕುಮಾರ್ ಬಿಡುಗಡೆಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಸ್.ಎಸ್. ಗಣೇಶ್ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ನ.೨೬ ರಂದು ಬೆಳಗ್ಗೆ ೯ ರಿಂದ ಉಚಿತ ಆರೋಗ್ಯ ಶಿಬಿರ ಹಾಗೂ ೨೭ ರಂದು ಬೆಳಗ್ಗೆ ೧೧ ಕ್ಕೆ ಮತ್ತು ಸಂಜೆ ೪ ರ ನಂತರ ಡಿ.ಜಿ. ನಾಗಭೂಷಣ್ ತಂಡದವರಿಂದ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ, ಕೊಳೇನಹಳ್ಳಿ ಶರಣಪ್ಪ, ಪ್ರದೀಪ್, ಯಮನಪ್ಪ ಉಪಸ್ಥಿತರಿದ್ದರು.