ನ.೨೬ರಂದು ಅಖಿಲ ಭಾರತ ಮುಷ್ಕರ=ವಿಜಯಭಾಸ್ಕರ್

ರಾಯಚೂರು,ನ.೮- ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನವಿರೋಧಿ,ರೈಲ್ವೆ ಖಾಸಗಿಕರಣ ವಿರೋದ ನೀತಿಗಳನ್ನು ಖಂಡಿಸಿ ನ.೨೬ರಂದು ಅಖಿಲ ಭಾರತ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್ ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ, ಎಐಟಿಯುಸಿ ಸಂಘವು ೧೯೨೦ ಅ.೩೨ರಂದು ಸ್ಥಾಪನೆಗೊಂಡು ಇಂದಿಗೆ ೧೦೦ ವರ್ಷ ಕಳೆದಿದೆ. ಸಂಘರ್ಷದ ವಾತವರಣದಲ್ಲಿ ನಮ್ಮ ಸಂಘವು ಸ್ಥಾಪನೆಯಾಗಿದೆ. ಇಲ್ಲಿಯವರೆಗೂ ಸುಮಾರು ೧೫ ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಸೇರಿ ೨೦೦ಕ್ಕೂ ಹೆಚ್ಚು ಮುಷ್ಕರವನ್ನು ನಡೆಸಲಾಗಿದೆ. ಲಾಲ್ ಜಲಪತ್ ರಾಯ್ ಅವರು ನಮ್ಮ ಸಂಘದ ಸಂಸ್ಥಾಪಕರಾಗಿದ್ದು, ಅಂದಿನ ಕಾರ್ಮಿಕರಲ್ಲಿ ಯಾವುದೇ ಕಟ್ಟುಪಾಡುಗಳು ಇರಲಿಲ್ಲ. ಕಾರ್ಮಿಕರ ಸುಧಾರಣೆಯ ಹೆಸರಿನಲ್ಲಿ ಕಾರ್ಪೋರೇಟ್ ಕಂಪನಿಯವರು ಸರ್ಕಾರದ ಆದಾಯವನ್ನು ಕಸಿದುಕೊಳ್ಳುತ್ತಿದ್ದಾರೆ. ೨೦೧೪ ಫೆ.೨೧, ೨೨ ರಂದು ಹೊಸ ಕಾಯ್ದೆಗಳ ತಿದ್ದುಪಡಿಗಳ ವಿರುದ್ದ ಎರಡು ದಿನಗಳ ನಿರಂತರ ಹೋರಾಟ ನಡೆಸಿದರು.
ಕೇಂದ್ರ ಸರ್ಕಾರ ನಗದು ಅಮಾನ್ಯಕರಣವನ್ನು ಜಾರಿಗೆ ತಂದು ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಜಾರಿಗೆ ತರುವುದಾಗಿ ಹೇಳಿದರು. ಆದರೆ ಇದುವರೆಗೂ ಯಾವುದೇ ಶಾಂತಿ ವಾತಾವರಣ ನಿರ್ಮಾಣವಾಗಿಲ್ಲ. ಮಧ್ಯ ರಾತ್ರಿಯಿಂದಲೆ ಜಿಎಸ್‌ಟಿ ಜಾರಿಗೆ ತಂದರು ಇದರಿಂದ ಹಲವಾರು ಜನ ಉದ್ಯಮಿಗಳು ಉದ್ಯೋಗವನ್ನು ಕಳೆದುಕೊಂಡರು. ನವೆಂಬರ್ ೨೬ರಂದು ರಾಷ್ಟ್ರವ್ಯಾಪಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ. ಈ ಮುಷ್ಕರದಲ್ಲ ಸುಮಾರು ೧೧ ಕೇಂದ್ರ ಕಾರ್ಮಿಕ ಸಂಘಟನೆಗಳು ಭಾಗವಹಿಸಲಿದ್ದು, ಸುಮಾರು ೩೦ ಕೋಟಿ ಜನ ಕಾರ್ಮಿಕರು ಮುಷ್ಕರದಲ್ಲಿ ಕಾರ್ಮಿಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಫಿ ಸಾಹೆಬ್, ಎಸ್.ಎಂ.ಪೀರ್, ಶ್ರೀಶೈಲರೆಡ್ಡಿ, ಗುರುರಾಮ ರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.