ನ.೨೫: ಬೆಂಗಳೂರಿನಲ್ಲಿ ಸಂಕಲ್ಪ ಸಮಾವೇಶ – ನರಸಿಂಹಲು

ರಾಯಚೂರು,ನ.೨೧- ಸಂವಿಧಾನ ಸಮರ್ಪಣ ದಿನದ ಅಂಗವಾಗಿ ಸಾಮಾಜಿಕ ನ್ಯಾಯಕ್ಕಾಗಿ ಸಂವಿಧಾನದ ಮೂಲ ನಿವಾಸಿಗಳ ಸಂಕಲ್ಪ ಸಮಾವೇಶವನ್ನು ನವೆಂಬರ್ ೨೫ ರಂದು ಬೆಂಗಳೂರಿನ ಟೌನ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಂತಿ ಜಿಲ್ಲಾ ಸಂಚಾಲಕ ಎಸ್.ನರಸಿಂಹಲು ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,
ಸಂವಿಧಾನದಲ್ಲಿ ಎಲ್ಲಾ ಜನಾಂಗಗಳಿಗೂ ಸಮಾನತೆ ಸಲ್ಲಿಸಬೇಕು ಎಂದು ಘೋಶಿಸಿರುವುದು ಭಾರತದ ಐತಿಹಾಸಿಕ ಸತ್ಯಗಳಾದ ಮೂಲ ನಿವಾಸಿ ನಾಗ ಅಥವಾ ಡ್ರಾವಿಡ ಜನಾಂಗ ಎಸ್.ಸಿ. , ಎಸ್.ಟಿ. ಒ.ಬಿ.ಸಿ. ಗಳ ಮೇಲೆ ವಿದೇಶಿ ಆರ್ಯಜನಾಂಗದವರು ನಡೆಸಿದ ದಮನಕ್ಕೆ ಪರಿಹಾರವಾಗಿದೆ ಎಂದರು.
ಕೆಲವ ಖಾಸಗಿ ವ್ಯಕ್ತಿ ಮತ್ತು ಕ್ಷೇತ್ರಗಳಲ್ಲಿ ಅಸಾಧಾರಣವಾಗಿ ಕೇಂದ್ರೀಕರಿಸಲ್ಪಟ್ಟ ಸಂಪತ್ತನ್ನು ಪ್ರಜೆಗಳಿಗಾಗಿ ಸಮಾನವಾಗಿ ವಿಸ್ತರಿಸಬೇಕೆಂದು ಸಂವಿಧಾನ ೩೮ ಮತ್ತು ೩೯ ವಿಧಿಗಳಲ್ಲಿ ಮತ್ತು ಸರ್ಕಾರದ ಸಬ್ಸಿಡಿ ಮುಂತಾದ ಸಂಪನ್ಮೂಲಗಳನ್ನು ಪರಿಶಿಷ್ಟರು ಸೇರಿದಂತೆ ಶೋಷಿತರಿಗೆ ಜನಸಂಖ್ಯೆವಾರು ಹಂಚಿಕೆ ಮಾಡಿ ಬಡತನವನ್ನು ಹೋರಲಾಡಿಸಬೇಕೆಂದು ಸಂವಿಧಾನದ ೪೬ ನೇ ವಿಧಿಯಲ್ಲಿ ಘೋರಿಸಲಾಗಿದೆ.ಆದರೆ ಸರ್ಕಾರಗಳು ಈ ವಿಧಿಗಳನ್ನು ಅನುಷ್ಠಾನ ಮಾಡದೆ ಜನವಿರೋದಿಯಾಗಿದ್ದು,ಬಡತನ ಹೇರಲು ಕಾರಣವಾಗಿದೆ ಎಂದು ಆರೋಪಿಸಿದರು
ಈ ಸಂಕಲ್ಪ ಸಮಾವೇಶ ಉದ್ಘಾಟನೆಯನ್ನು ಶಾಸಕ ಸತೀಶ್ ಜಾರಕಿಹೊಳೆ ಅವರು ಮಾಡಲಿದ್ದಾರೆ.ದಿವ್ಯ ಸಾನಿಧ್ಯ ಜ್ಞಾನಪ್ರಕಾಶ ಬಂತೇಜಿರವರು ವಹಿಸಲಿದ್ದಾರೆ. ಬಂಜಿಗೇರ ಜಯಪ್ರಕಾಶ ಪ್ರಗತಿಪರ ಚಿಂತಕರು ಹಾಗೂ ಸಾಹಿತಿಗಳು, ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ಅಂಬೇಡ್ಕರ ಅನುಯಾಯಿಗಳು ಅಭಿಮಾನಿಗಳು,ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹನುಮೇಶ ಆರೋಲಿ,ನಾಗೇಂದ್ರ ಬಡಿಗೇರ,ಜಿ.ನರಸಿಂಹಲು,ತಿಮ್ಮಪ್ಪ ಇದ್ದರು.