ನ. ೨೪ ರಿಂದ ೩ ದಿನ ಬೆಂಗಳೂರು ಕಂಬಳ

ಬೆಂಗಳೂರು, ನ. ೭- ಬಂಟರ ಸಂಘದ ಸಭಾಂಗಣದಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ಸಾಂಸ್ಕೃತಿಕ ಕ್ರೀಡೆಯಾದ ಕಂಬಳವನ್ನು ’ಬೆಂಗಳೂರು ಕಂಬಳ ನಮ್ಮ ಕಂಬಳ’ ಎಂಬ ಧ್ಯೇಯ ವಾಕ್ಯದೊಡನೆ ಬೆಂಗಳೂರಿನಲ್ಲಿ ನವೆಂಬರ್ ೨೪, ೨೫ ಮತ್ತು ೨೬ ರಂದು ಆಯೋಜಿಸಿಲಾಗಿದೆ.
ಇತಿಹಾಸ ಸೃಷ್ಟಿಸರುವ ಬೆಂಗಳೂರು ಕಂಬಳ’ ಕಾರ್ಯಕ್ರಮದಲ್ಲಿ ಕರಾವಳಿ ಜಿಲ್ಲೆಯ ಪ್ರತಿಯೊಬ್ಬರೂ ಭಾಗವಹಿಸುವುದರ ಜೊತೆಗೆ ನಮ್ಮದೇ ಹಬ್ಬವನ್ನಾಗಿ ಆಚರಿಸಬೇಕಾಗಿದೆ.
ಬೆಂಗಳೂರುನಲ್ಲಿ ನೆಲೆಸಿರುವ ನಮ್ಮೆಲ್ಲಾ ಬಂಧುಗಳು, ಸಂಘಟನೆಗಳು, ಜಾತೀಯ ಸಂಘಟನೆಗಳು, ಸಾಂಸ್ಕೃತಿಕ ಸಂಘಟನೆಗಳು, ಈ ಮಹಾ ಉತ್ಸವದಲ್ಲಿ ಪಾಲ್ಗೊಳ್ಳಬೇಕಾದುದು ನಮ್ಮೆಲ್ಲರ ಕರ್ತವ್ಯ ಕೂಡ.
ಈ ನಿಟ್ಟನಲ್ಲಿ ಕಾರ್ಯಕ್ರಮದ ರೂಪುರೇಷೆಯನ್ನು ತಯಾರಿಸಲು, ಆಯೋಜಕರು ಬೆಂಗಳೂರಿನಲ್ಲಿ ನೆಲೆಸಿರುವ ಸರ್ವ ಜಾತೀಯ ಸಂಘಟನೆಗಳ ಪ್ರಮುಖರೊಂದಿಗೆ ಚರ್ಚಿಸಿ, ಎಲ್ಲ ಅತ್ಯಮೂಲ್ಯ ಸಲಹೆಗಳನ್ನು ಪಡೆಯಲು ತೀರ್ಮಾನಿಸಿಲಾಯಿತು.
ಕಂಬಳ ಸಮಿತಿಯ ಗೌರವಾಧ್ಯಕ್ಷರಾದ ಪ್ರಕಾಶ್ ಶೆಟ್ಟಿಯವರ ನೇತೃತ್ವದಲ್ಲಿ ಹಾಗೂ ಈ ಸಭೆಯಲ್ಲಿ ಅಧ್ಯಕ್ಷರಾದ ಅಶೋಕ ರೈ ರವರು, ಕಾರ್ಯಾಧ್ಯಕ್ಷರಾದ ಗುರುಕಿರಣ್ ರವರು, ಉಪಾಧ್ಯಕ್ಷರಾದ ಗುಣರಂಜನ್ ಶೆಟ್ಟಿಯವರು ಮತ್ತು ಸಂಘಟನಾಧ್ಯಕ್ಷರಾದ ಉಮೇಶ್ ಶೆಟ್ಟಿಯವರು ಮತ್ತು ಉಪೇಂದ್ರ ಶೆಟ್ಟಿಯವರು ಹಾಗೂ ಇನ್ನಿತರ ಪದಾಧಿಕಾರಿಗಳು ಭಾಗವಹಿಸಿದ್ದರು.
ಅರಮನೆ ಮೈದಾನದಲ್ಲಿ ನವಂಬರ್ ೨೪, ೨೫ ಮತ್ತು ೨೬ರಂದು ನಡೆಯಲಿರುವ ’ಬೆಂಗಳೂರು ಕಂಬಳ- ನಮ್ಮ ಕಂಬಳ’ದಲ್ಲಿ ಭಾಗವಹಿಸಲು ಈಗಾಗಲೇ ೧೫೦ ಅಧಿಕ ಕೋಣಗಳ ನೋಂದಣಿಯಾಗಿದ್ದು, ನ.೨೩ರಂದು ಕೋಣಗಳಿಗೆ ಉಪ್ಪಿ ನಂಗಡಿಯಲ್ಲಿ ಬೀಳ್ಕೊಡುಗೆ ನಡೆಯಲಿದೆ. ಬಳಿಕ ಬೆಂಗಳೂರಿಗೆ ಬರಲಿವೆ ಎಂದು ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷರಾಗಿರುವ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.
ಬೆಂಗಳೂರು ಕಂಬಳಕ್ಕೆ
೧೦ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಅದಕ್ಕೆ ತಕ್ಕಂತೆ ತಯಾರಿ ಮಾಡಿಕೊಳ್ಳಲಾಗಿದೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಕರಾವಳಿಯ ಸಮಸ್ತ ಸಮುದಾಯದವರು ಒಟ್ಟಾಗಲಿದ್ದಾರೆ. ೫೦ ಅಧಿಕ ಸಂಘಟನೆಗಳು ಕಂಬಳಕ್ಕೆ ಸಹಕಾರ ನೀಡುತ್ತಿವೆ ಎಂದು ಕಂಬಳ ಸಮಿತಿ ಗೌರವಾಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ವಿವರಿಸಿದರು.
ಬೆಂಗಳೂರಿನ ಅರಮನೆ ಮೈದಾನದ ೭೦ ಎಕರೆ ಜಾಗದಲ್ಲಿ ಕಂಬಳ ನಡೆಯಲಿದೆ ಎಂದು
ಸಮಿತಿ ಕಾರ್ಯಾಧ್ಯಕ್ಷ ಕಾರ್ಯಾಧ್ಯಕ್ಷ, ಸಂಗೀತ ನಿರ್ದೇಶಕ ಗುರುಕಿರಣ್ ತಿಳಿಸಿದರು.
ಮಾನ್ಯ ಮುಖ್ಯಮಂತ್ರಿಗಳಾದ ಉಪಮುಖ್ಯಮಂತ್ರಿಗಳು, ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪರವರು,ಡಿ.ವಿ.ಸದಾನಂದಗೌಡರು, ಬಾಲಿವುಡ್ ನಟಿ ಐಶ್ವರ್ಯಾ ರೈ, ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ, ಬಾಲಿವುಡ್ ನಟಿ ಶಿಲ್ಪಶೆಟ್ಟಿ, ಕನ್ನಡ ಚಿತ್ರರಂಗದ ಹಾಟ್ರಿಕ್ ಹಿರೋ ಶಿವರಾಜ್ ರಾಜ್ ಕುಮಾರ್, ರಾಕಿಂಗ್ ಸ್ಟಾರ್ ಯಶ್, ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ ಕೆ.ಎಲ್.ರಾಹುಲ್ ಸೇರಿದಂತೆ ವಿವಿಧ ಚಿತ್ರರಂಗ ಗಳಲ್ಲಿ ಇರುವ ಕರಾವಳಿ ಮೂಲದ ಸಿನಿಮಾತಾರೆಯರು ಭಾಗವಹಿಸಲಿದ್ದಾರೆ ಹಾಗೂ ೨೪ನೇ ತಾರೀಖು ತುಳು ಕೂಟ ರಚನೆಯಾಗಿ ೫೦ವರ್ಷದ ತುಂಬಿದ ವರ್ಷಾಚರಣೆ ಸಂಭ್ರಮ ಎಂದು ಸಂಘಟನಾ ಅಧ್ಯಕ್ಷ ಉಮೇಶ್ ಶೆಟ್ಟಿ ತಿಳಿಸಿದರು.