ನ.೨೩ : ಶ್ರೀ ಕಲಕೋಟಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ

ರಾಯಚೂರು.ನ.೨೨- ಪ್ರತಿ ವರ್ಷದಂತೆ ಈ ವರ್ಷವೂ ನಗರದ ಬೇರೂನಕಿಲ್ಲಾದಲ್ಲಿರುವ ಶ್ರೀ ಕಲಕೋಟಿ ವೀರಭದ್ರೇಶ್ವರ ದೇವಸ್ಥಾನದ ಜಾತ್ರೆ ನ.೨೩ ರಂದು ಮಹೋತ್ಸವವೂ ನಡೆಸಲಾಗುವುದು.
ಶ್ರೀ ವರಕಟ್ಟೆ ಬಸವೇಶ್ವರ ದೇವಸ್ಥಾನ ಬೇರೂನಕಿಲ್ಲಾದಿಂದ ಕುಂಭಮೇಳ ಮತ್ತು ಕಳಸ ಕಿಲ್ಲಾ ಬೃಹನ್ಮಠದ ಮುಂಭಾಗದಿಂದ ಏಕಮೀನಾರ ರಸ್ತೆ ಮುಖಾಂತರ ಶ್ರೀ ಕಲಕೋಟಿ ವೀರಭದ್ರೇಶ್ವರ ದೇವಸ್ಥಾನಕ್ಕೆ ತಲುಪಲಿದೆ. ಸಂಜೆ ೬ ಘಂಟೆಯಿಂದ ರಾತ್ರಿ ೯ ಘಂಟೆವರೆಗೆ ದೀಪೋತ್ಸವ ನಡೆಸಲಾಗುವುದು. ನ.೨೩ ರಂದು ರಾತ್ರಿ ೧ ಘಂಟೆಯಿಂದ ಪಲ್ಲಕ್ಕಿ ಸೇವೆ ನಡೆಸಲಾಗುವುದು. ಮುಂಜಾನೆ ೫ ಘಂಟೆಗೆ ಅಗ್ನಿ ಪ್ರವೇಶ ಹಾಗೂ ನ.೨೪ ರಂದು ಸಂಜೆ ೬ ಘಂಟೆಗೆ ಉಚ್ಛಾಯ್ ಕಾರ್ಯಕ್ರಮ ನಡೆಸಲಾಗುವುದು.
ಜಾತ್ರೆಗೆ ಸರ್ವ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಕಲಕೋಟಿ ವೀರಭದ್ರೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನ ಸಮಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಪ್ರಕಟನೆ ತಿಳಿಸಿದ್ದಾರೆ.