ನ.೨೦ ರಂದು ಉಚಿತ ಕ್ಯಾನ್ಸರ್ ಪತ್ತೆ ಶಿಬಿರ – ಡಾ. ಶ್ಯಾಮಣ್ಣ ಮಾಚನೂರು

ರಾಯಚೂರು ನ.೧೫ – ಕಲ್ಬುರ್ಗಿ ಮೂಲದ ಹೆಚ್ ಸಿ ಜಿ ಕ್ಯಾನ್ಸರ್ ಆಸ್ಪತ್ರೆ ಮತ್ತು ರೋಟರಿ ಕ್ಲಬ್ ಮಹಾಲಕ್ಷ್ಮಿ ವಲಯದ ಸಹಯೋಗದಲ್ಲಿ ನ.೨೦ ರಂದು ಬೆಳಿಗ್ಗೆ ೯.೩೦ ರಿಂದ ೩.೩೦ ರವರೆಗೆ ಉಚಿತ ಕ್ಯಾನ್ಸರ್ ಪತ್ತೆ ಶಿಬಿರವನ್ನು ನಗರದ ಅಮರೇಶ್ವರ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ ಎಂದು ಡಾ. ಶ್ಯಾಮಣ್ಣ ಮಾಚನೂರು ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು,ರೋಟರಿ ಕ್ಲಬ್ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತ ಸಮಾಜದ ಸೇವೆ ಮಾಡಲಾಗುತ್ತದೆ. ಕಳೆದ ವಾರ ಆಯೋಜನೆ ಮಾಡಿದ ಕೃತಕ ಕೈ ಕಾಲು ಜೋಡಣೆಯಿಂದ ಈ ಭಾಗದ ಹತ್ತರು ಕುಟುಂಗಳಿಗೆ ಅನಕೂಲವಾಗಿದೆ. ಈ ಭಾಗದಲ್ಲಿ ಕ್ಯಾನ್ಸರ್ ರೋಗ ಸಾಮನ್ಯವಾಗಿ ಕಂಡು ಬಹರುತ್ತಿರುವ ಹಿನ್ನಲೆಯಲ್ಲಿ ಉಚಿತ ಕ್ಯಾನ್ಸರ್ ಪತ್ತೆ ಶಿಬಿರ ಆಯೋಜನೆ ಮಾಡಲಾಗಿದೆ. ಈ ಶಿಬಿರದ ನಗರದ ಜನರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕ್ಯಾನ್ಸರ್ ಲಕ್ಷಣಗಳು ಬಾಯಿಯಲ್ಲಿ ಹಾಗೂ ದೇಹದ ಇತರೆ ಭಾಗದಲ್ಲಿ ವಾಸಿಯಾಗದ ಹುಣ್ಣು ಗಂಟು.ಆಹಾರ ನುಂಗಲು ಕಷ್ಟ ಹಾಗೂ ಬಾಯಿ ತೆರೆಯಲು ಕಷ್ಟವಾಗುವುದು.ಸ್ತ್ರೀಯರಿಗೆ ಸ್ತನದಲ್ಲಿ ಗಂಟು,ಸ್ರಾವ ವಿದ್ದರೆ ಹಾಗೂ ಗರ್ಭ ಕೊಸದಲ್ಲಿ ಗಂಟು,ಅನಿಯವಿತವಾಗಿ ರಕ್ತ ಸ್ರಾವ ವಿದ್ದಲಿ ಕೂಡಲೇ ವೈದರಿಂದ ಸಲಹೆ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ನ ವಿಜಯ ಸಜ್ಜನ್, ಲಕ್ಷ್ಮೀಕಾಂತ್, ಚಂದ್ರಶೇಖರ್,ಪ್ರಮೋದ್ ಕುಮಾರ್ ಇದ್ದರು.