ನ.೨೦ರಂದು ಬಿಜೆಪಿ ಎಸ್ ಟಿ ಮೋರ್ಚಾ ಬೃಹತ್ ಸಮಾವೇಶ:ಮಲ್ಲಿಕಾರ್ಜುನ್ ಜಕ್ಕಲದಿನ್ನಿ ಗೊಂದಲ ಸೃಷ್ಠಿ- ಗಂಗಾಧರ ನಾಯಕ

ಮಾನ್ವಿ:ನ.೧೮. ಬಳ್ಳಾರಿಯಲ್ಲಿ ನವಂಬರ್ ೨೦ರಂದು ಬಿಜೆಪಿ ಎಸ್ ಟಿ ಮೋರ್ಚಾ ವತಿಯಿಂದ ಬೃಹತ್ ಸಮಾವೇಶಕ್ಕೆ ಮಾನವಿ ವಿಧಾನಸಭಾ ಕ್ಷೇತ್ರದಿಂದ ೧೫ ಸಾವಿರ ಜನ ಹೋಗಲಾಗುವುದು ಎಂದು ಬಿಜೆಪಿ ಎಸ್ ಟಿ ರಾಷ್ಟ್ರೀಯ ಉಪಾಧ್ಯಕ್ಷರಾದ ಗಂಗಾಧರ ನಾಯಕ ಹೇಳಿದರು.
ಪಟ್ಟಣದ ಪತ್ರಿಕ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ನವಂಬರ್ ೨೦ರಂದು ಬಳ್ಳಾರಿಯಲ್ಲಿ ನಡೆಯಲಿರುವ ಎಸ್ ಟಿ ಮೋರ್ಚಾ ವತಿಯಿಂದ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಭಾಗವಹಿಸಲು ಮಾನ್ವಿ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷದ ವತಿಯಿಂದ ೧೫೦ ಬಸ್ಸು ಬಿಡಲಾಗಿದೆ, ಪ್ರತಿ ಬಸ್ಸನಲ್ಲಿ ಕಡ್ಡಾಯವಾಗಿ ೫೨ ಜನರಿರಬೇಕೆಂಬ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಆದೇಶಿಸಿದ್ದಾರೆ ಹಾಗಾಗಿ ಯಾವುದೇ ಬಸ್ಸಿನಲ್ಲಿ ಕಡಿಮೆ ಜನರು ಇರದೇ ಬಸ್ನಲ್ಲಿರುವ ಎಲ್ಲಾ ಸೀಟ್ ಗಳು ಭರ್ತಿಯಾಗಿರಬೇಕು, ಬಸ್ಸುಗಳು ಸಾಲದಿದ್ದರೆ ಕ್ರಷರ ವ್ಯವಸ್ಥೆ ಮಾಡಲಾಗುತ್ತದೆ.
ನವಂಬರ್ ೨೦ರಂದು ಬಳ್ಳಾರಿಯಲ್ಲಿ ನಡೆಯಲಿರುವ ಸಮಾವೇಶಕ್ಕೆ ಹೋಗಲು ಮಾನ್ವಿ ವಿಧಾನಸಭಾ ಕ್ಷೇತ್ರಕ್ಕೆ ೨೦೦ ಬಸ್ ಗಳು ದೇವದುರ್ಗದ ಶಾಸಕ ಕೆ ಶಿವನಗೌಡ ನಾಯಕ ಬಿಟ್ಟಿದ್ದಾರೆ ಎಂದು ಹೇಳಿ ಮಾನ್ವಿ ಕ್ಷೇತ್ರದ ಜನರಲ್ಲಿ ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ.
ಈ ರೀತಿ ಗೊಂದಲಗಳಿಗೆ ಬಿಜೆಪಿ ಕಾರ್ಯಕರ್ತರು ಕಿವಿ ಕೊಡಬಾರದು.ದೇವದುರ್ಗದ ಶಾಸಕ ಕೆ. ಶಿವನಗೌಡ ನಾಯಕ ಅವರು ಬಳ್ಳಾರಿಯಲ್ಲಿ ನವಂಬರ್ ೨೦ರಂದು ನಡೆಯಲಿರುವ ಸಮಾವೇಶಕ್ಕೆ ಹೋಗಲು ಮಾನ್ವಿ ವಿಧಾನಸಭಾ ಕ್ಷೇತ್ರಕ್ಕೆ ಸ್ವಂತ ೨೦೦ ಬಸ್ ಗಳು ಬಿಟ್ಟರೇ ಅವರೇ ಸ್ವಂತ ಹೇಳಿಕೆ ನೀಡಲಿ ಮಾನ್ವಿ ಬಿಜೆಪಿ ಮಂಡಲ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಜಕ್ಕಲದಿನ್ನಿ ಯಾಕೆ ಹೇಳಿಕೆ ಕೊಟ್ಟು ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಶರಣಪ್ಪ ಗೌಡ ನಕ್ಕುಂದಿ, ಅಯ್ಯಪ್ಪ ಮ್ಯಾಕಲ್, ಗುರು ಗೌಡ ಕಣ್ಣೂರ್, ಶ್ರೀಕಾಂತ್ ಗೂಳಿ, ರಂಗಪ್ಪ ನಾಯಕ್, ವೆಂಕಟೇಶ್, ಚಂದ್ರು ನಾಯಕ್, ಉಮಾಪತಿ ಹರಿವಿ, ಕುಮಾರ ಮೇಧ, ವೆಂಕಟೇಶ ಹಲ್ದಾಳ್, ಬಸವರಾಜ್ ನಕ್ಕುಂದಿ, ನಾಗರಾಜ ಕಬ್ಬೆರ್, ಸುದರ್ಶನ್ ಹಾಗೂ ಉಪಸ್ಥಿತರಿದ್ದರು.