ನ.೧ ರಂದು ೫೦೦೦ ಜನರಿಗೆ ಉದ್ಯೋಗಮೇಳ

ಸಂಜೆವಾಣಿ ವಾರ್ತೆ

ದಾವಣಗೆರೆ. ಅ.30; ಎಐಎಂ ಅಕಾಡೆಮಿ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನ.೧ ರಂದು ಶಿರಮಗೊಂಡನಹಳ್ಳಿಯಲ್ಲಿರುವ ವೀರೇಂದ್ರ ಪಾಟೀಲ್ ಸಮುದಾಯ ಭವನದಲ್ಲಿ ಬೆಳಗ್ಗೆ ೯ ರಿಂದ ಸಂಜೆ ೬ ಗಂಟೆಯವರೆಗೆ ಕರ್ನಾಟಕ ನಟರಾಜ ಹೆಸರಿನಲ್ಲಿ ೫೦೦೦ ಕ್ಕೂ ಹೆಚ್ಚು ಜನರಿಗಾಗಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿಯ ರಾಜು ಯಾದವ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಉದ್ಯೋಗಾಕಾಂಕ್ಷಿಗಳಿಗೆ ಉಚಿತ ಪ್ರವೇಶ ಲಭ್ಯವಿದೆ.೩೧ ಜಿಲ್ಲೆಯ ನಿರುದ್ಯೋಗಿ ಕಲಾವಿದರಿಗೆ ಮತ್ತು ನಿರುದ್ಯೋಗ ಯುವ ಸಮೂಹಕ್ಕಾಗಿ ಈ ಅವಕಾಶ ಕಲ್ಪಿಸಲಾಗಿದೆ ಎಂದರು.ಪ್ರತಿ ಜಿಲ್ಲೆಗೆ 100 ಉದ್ಯೋಗ ಗುರುತಿಸಿ ಶೈಕ್ಷಣಿಕ ವಿದ್ಯಾರ್ಹತೆಯ ಅನುಗುಣವಾಗಿ ಪ್ರೋತ್ಸಾಹಿಸಲಾಗುವುದು.  ಅನೇಕ ಕಲಾವಿದರು, ಪದವೀಧರರು ಅವಕಾಶ ವಂಚಿತರಾಗಿ ನಿರುದ್ಯೋಗಿಗಳಾಗಿರುತ್ತಾರೆ. ಇಂತಹ ಕಲಾವಿದರು ಹಾಗೂ ಉದ್ಯೋಗ ಆಕಾಂಕ್ಷಿಗಳನ್ನು ಗುರುತಿಸಿ ನಮ್ಮ ಎ.ಐ.ಎಂ ಅಕಾಡೆಮಿ ಸಲ ವತಿಯಿಂದ 5 ಸಾವಿರಕ್ಕೂ ಹೆಚ್ಚಿನ ಉದ್ಯೋಗವನ್ನು ನೀಡುವ ಉದ್ದೇಶ ನಮ್ಮದು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ  ಜಿಲ್ಲಾ ಕನ್ನಡ ಪರ ಸಂಘಟನೆಗಳ ಒಕ್ಕೂಟದ ವಕ್ತಾರರಾದ ರತನ್, ಆಕಾಶವಾಣಿ ಕಲಾವಿದರು ಹಾಗೂ‌ ಸಂಗೀತ ಶಿಕ್ಷಕರಾದ ಗೀರಿಶ್. ಡಿ ಆಗಮಿಸಲಿದ್ದಾರೆ.ಇದೇ ವೇಳೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಶೃತಿ,ಮಹೇಶ್,ಎಸ್ ವೀರೇಶ್,ಎ.ಶಿವಕುಮಾರ್ ಇದ್ದರು.