ನ.೧೯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ,ಪ್ರಶಸ್ತಿ ಪ್ರದಾನ – ಎ.ಚ್ ಮ್ಯಾದರ್

ರಾಯಚೂರು,ನ.೧೭- ಜಿಲ್ಲಾ ಕನ್ನಡ ಕ್ರಿಯಾ ಸಮಿತಿ ವತಿಯಿಂದ ನವೆಂಬರ್ ೧೯ ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನಗರದ ರಂಗಮಂದಿರದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಎಚ್.ಎ.ಚ್ ಮ್ಯಾದಾರ್ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಈ ಕರ್ಯಕಮದಲ್ಲಿ ಪ್ರಶಸ್ತಿ ಪ್ರದಾನ,ಸಾಧಕರಿಗೆ ಸನ್ಮಾನ,ಸ್ಪರ್ಧೆ ವಿಜೇತ ಶಾಲಾ ಕಾಲೇಜು ಮಕ್ಕಳಿಗೆ ಹಾಗೂ ಎಸ್.ಎಸ್.ಎಲ್.ಸಿ ಅತಿ ಹೆಚ್ಚು ಅಂಕ ಪಡೆದ ತಾಲೂಕಿಗೊಬ್ಬ ಮಕ್ಕಳಿಗೆ ಬಹುಮಾನ,ಸುಗಮ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟನೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಹೆ.ಚ್ ಪಂಪಯ್ಯ ಶೆಟ್ಟರು ಮಾಡಲಿದ್ದಾರೆ.ಅಧ್ಯಕ್ಷತೆಯನ್ನು ಸಮಿತಿಯ ಗೌರವಾಧ್ಯಕ್ಷ ಎಚ್.ಎಚ್ ಮ್ಯಾದಾರ್,ಪ್ರಾಸ್ತಾವಿಕವಾಗಿ ಸಮಿತಿಯ ಅಧ್ಯಕ್ಷ ಬಶೀರ ಅಹ್ಮದ ಹೊಸಮನಿ ಅವರು ಮಾತನಾಡಲಿದ್ದಾರೆ.ಮುಖ್ಯ ಅಥಿತಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರಂಗಣ್ಣ ಪಾಟೀಲ್ ಅಲ್ಲುಂಡಿ,ಬೆಂಗಳೂರಿನ ಬಂಡಾಯ ಸಾಹಿತಿ ಸಂಘಟನೆಯ ರಾಜ್ಯ ಮಾಜಿ ಸಂಚಾಲಕ ಭಗತರಾತ ನಿಜಾಮಕಾರಿ,ಕಾಂಗ್ರೆಸ್ ಮುಖಂಡ ಬಶೀರುದ್ದಿನ್,ಚನ್ನಪ್ಪ ಸಜ್ಜನ್,ದಾನಮ್ಮ ಸುಭಾಷ ಚಂದ್ರ ತಡಕಲ್ ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಬಶೀರ ಅಹ್ಮದ್ ಹೊಸಮನಿ, ಉಪಾಧ್ಯಕ್ಷ ಡಾ.ಶಾಂತಾ ಕುಲಕರ್ಣಿ,ರಫೀಕ್ ಅಹ್ಮದ್ ಇದ್ದರು.