ನ.೧೮ ಕ್ಕೆ ಮಠ ಚಿತ್ರ ರಾಜ್ಯಾದ್ಯಂತ ಬಿಡುಗಡೆ

ದಾವಣಗೆರೆ. ನ.೧೬; ಪ್ರವಾಸ ಕಥನದ ಆಧಾರದ ಮೇಲೆ ಮಠಚಿತ್ರ ನಿರ್ಮಾಣ ಮಾಡಲಾಗಿದೆ ಈ ಚಿತ್ರ ನ.೧೮ ರಂದು ಬಿಡುಗಡೆಯಾಗಲಿದೆ ಎಂದು ಚಿತ್ರದ ನಾಯಕ‌ನಟ ಸಂತೋಷ್ ದಾವಣಗೆರೆ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಾದ್ಯಂತ ಸುಮಾರು ೩೬ ಕಿ.ಮೀ ಸಂಚರಿಸಿದ್ದೇನೆ.೫ ಸಾವಿರ ಹಳ್ಳಿಗಳನ್ನು ಸಂಚರಿಸಿದ್ದೇನೆ.ಮಠಗಳಿಗೆ ಭೇಟಿ ನೀಡಿ ಅದರ ಅನುಭವವನ್ನು ಚಿತ್ರರೂಪದಲ್ಲಿ ಹೊರತರಲಾಗಿದೆ.ನನ್ನ ಅನುಭವ ಕುರಿತು ಮಠ ಮಾರ್ಗ ದರ್ಶನ ಎಂಬ ಪುಸ್ತಕ ಬರೆದಿದ್ದೇನೆ ಅದರ ಆಧಾರದಲ್ಲಿ ಈ ಚಿತ್ರ ನಿರ್ಮಾಣ ಮಾಡಲಾಗಿದೆ ಎಂದರು.ಈಗಾಗಲೇ ಮಠ ಚಿತ್ರ  ತೆರೆಗೆ ಬಂದಿತ್ತು.ನಿರ್ದೇಶಕ ಗುರುಪ್ರಸಾದ್ ಅವರನ್ನು ಭೇಟಿ ಮಾಡಿ ಅವರ ಸಲಹೆಯಂತೆ ನಮ್ಮ ಚಿತ್ರಕ್ಕೆ ಮಠ ಎಂಬ ಹೆಸರಿಟ್ಟೀದ್ದೇವೆ. ೧೨ ವರ್ಷದ ನಂತರ ಹೆಸರನ್ನೀಡಬಹುದು ಎಂಬ ಹಿರಿಯರ ಸಲಹೆ ಮೇರೆಗೆ ಮತ್ತೆ ಮಠ ಎನ್ನುವ ಹೆಸರಿಡಲಾಗಿದೆ.ಇದೊಂದು ಕಲಾತ್ಮಕ ಚಿತ್ರವಾಗಿದೆ.ಪ್ರವಾಸ ಕಥನವಾಗಿದ್ದು ಅದನ್ನು ಚಿತ್ರದ ರೂಪದಲ್ಲಿ ತರಲಾಗಿದೆ. ಚಿತ್ರದಲ್ಲಿ ಮಠ ಗುರುಪ್ರಸಾದ್,ಸಾಧುಕೋಕಿಲ,ಬಿರಾದರ್,ಮಂಡ್ಯ ರಮೇಶ ಸೇರಿದಂತೆ ೭೦ ಜನ ಹಿರಿಯ ಕಲಾವಿದರಿದ್ದಾರೆ.ರಾಜ್ಯದ ೭೦ ಲೋಕೇಶನ್ ನಲ್ಲಿ ಚಿತ್ರೀಕರಣ ಮಾಡಲಾಗಿದೆ.ಮಠ ಚಿತ್ರವನ್ನು ರವೀಂದ್ರ ವೆಂಶಿ ನಿರ್ದೇಶನ ಮಾಡಿದ್ದಾರೆ. ರಮೇಶ್ ರಮಾನಂದ ನಿರ್ಮಾಪಕರಾಗಿದ್ದು ಚಿತ್ರದಲ್ಲಿ ೫ ಹಾಡುಗಳಿದ್ದು ಯೋಗರಾಜ್ ಭಟ್,ನಾಗೇಂದ್ರಪ್ರಸಾದ್,ಗೌಸ್ ಅವರು ಹಾಡುಗಳನ್ನು ರಚಿಸಿದ್ದಾರೆ.ಶ್ರೀಗುರು ಹಾಗೂ ವಿ ಮನೋಹರ್ ಸಂಗೀತ ನಿರ್ದೇಶನ ಮಾಡಿದ್ದಾರೆ ಎಂದರು.ರಾಜ್ಯದ ೧೦೦ ಚಿತ್ರ ಮಂದಿರದಲ್ಲಿ ಮಠ ಚಿತ್ರ ಬಿಡುಗಡೆಯಾಗಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ನಾಯಕಿ ಆಶ್ರೀತ್ ಮಲ್ಲಿಂಗಡ,ರವೀಂದ್ರ ಅರಳಗುಪ್ಪಿ,ಅನಿಲ್,ನಿಂಗೋಜಿರಾವ್ ಉಪಸ್ಥಿತರಿದ್ದರು.