ನ.೧೪ ರಂದು ಶ್ರೀಶೈಲ ಜಗದ್ಗುರುಗಳ ಪಾದಯಾತ್ರೆ ಆಗಮನ :ಚಂದ್ರಶೇಖರ ಪಾಟೀಲ್

ದೇವದುರ್ಗ.ನ.೧೧- ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಮಹಾಸ್ವಾಮಗಳು ಯಡೂರದಿಂದ ಶ್ರೀಶೈಲ್ ಕ್ಷೇತ್ರದವರೆಗೆ ಹೊರಟಿರುವ ಪಾದಯಾತ್ರೆ ನ. ೧೪ರಂದು ದೇವದುರ್ಗ ತಾಲೂಕನ್ನು ಪ್ರವೇಶ ಹೊಂದಲಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿಯ್ಯಾಪುರ ತಿಳಿಸಿದ್ದಾರೆ.
ಅವರು ಪಟ್ಟಣದಲ್ಲಿ ಶುಕ್ರವಾರ ಸುದ್ಧಿಗಾರರೊಂದಿಗೆ ಮಾತನಾಡಿ ದೇವದುರ್ಗ ಪಟ್ಟಣದ ಬಿ.ಎಚ್.ಕಲ್ಯಾಣ ಮಂಟಪ ಹಾಗೂ ಲಕ್ಷ್ಮೀ ಪ್ಯಾಲೇಸ್ ಆವರಣದಲ್ಲಿ ನ.೧೫ ರಂದು ಧರ್ಮ ಜಾಗೃತಿ ಸಭೆ ಆಯೋಜಿಸಲಾಗಿದೆ. ಮಾನವ ಕುಲಕ್ಕೆ ಲೇಸನ್ನು ಬಯಸುವುದರಿಂದ ಜಗದ್ಗುರುಗಳು ಪಾದಯಾತ್ರೆ ಮೂಲಕ ಧಾರ್ಮಿಕ, ಸಾಮಾಜಿಕ ಹಾಗೂ ಜನಜಾಗೃತಿ ಮೂಡಿಸಲು ಪಾದಯಾತ್ರೆ ಕಾರ್ಯಕ್ರಮ ಏರ್ಪಡಿಸಿದ್ದಾರೆ. ತಾಲೂಕಿನ ಎಲ್ಲಾ ಸಮುದಾಯಗಳ ಭಕ್ತರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿಯ್ಯಾಪುರ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಮೃತೇಶ್ವರ ಸ್ವಾಮೀಜಿ, ಮುಖಂಡರಾದ ಮಲ್ಲಿಕಾರ್ಜುನ ಪಾಟೀಲ್ ಅಂಚೇಸೂಗೂರು, ಶರಣಗೌಡ ಕಮತಿಗಿ, ಬಸವರಾಜಪ್ಪ ಬಂಡೆಗುಡ್ಡ, ಮಹಾದೇವಪ್ಪಗೌಡ ಚಿಕ್ಕಬೂದೂರು ಸೇರಿದಂತೆ ಇತರರು ಇದ್ದರು.