ನ.೧೩ ಮಡಿವಾಳ ಸಮಾಜದಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ,ಸನ್ಮಾನ ಕಾರ್ಯಕ್ರಮ

ರಾಯಚೂರು,ನ.೧೧- ಜಿಲ್ಲಾ ಮಡಿವಾಳ ಮಾಚಿದೇವ ಸಮಾಜ ವತಿಯಿಂದ ನವೆಂಬರ್ ೧೩ ರಂದು ಬೆಳ್ಳಿಗೆ ೧೦-೩೦ ಕ್ಕೆ ರಂಗಮಂದಿರದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಿಚ್ಛಾಲಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಚಿತ್ರದುರ್ಗ ಮಾಚಿದೇವ ಮಹಾಸಂಸ್ಥಾನ ಮಠದ ಡಾ.ಬಸವ ಮಾಚಿದೇವ ಮಹಾಸ್ವಾಮಿಗಳು,ಕಿಲ್ಲೇ ಬೃಹನ್ಮಠದ ಶಂತಾಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು,ಸೋಮವಾರ ಪೇಟೆಯ ಅಭಿನವ ರಾಚೋಟಿ ವೀರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ.ಉದ್ಘಾಟನೆಯನ್ನು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಮಾಡಲಿದ್ದಾರೆ.ಕಾರ್ಯಕ್ರಮವನ್ನು ಅಧ್ಯಕ್ಷತೆಯನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಎನ್ ಶಂಕ್ರಪ್ಪ ವಹಿಸಲಿದ್ದಾರೆ ಎಂದರು.
ಮುಖ್ಯ ಅಥಿತಿಗಳಾಗಿ ಎ.ಐ.ಸಿ.ಸಿ ಕಾರ್ಯದರ್ಶಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜ,ಸಂಸದ ರಾಜಾ ಅಮರೇಶ್ವರ ನಾಯಕ,ಗ್ರಾಮೀಣ ಶಾಸಕ ಬಸನಗೌಡ ದದ್ದಲ್,ಮಾಜಿ ಶಾಸಕ ಎ. ಪಾಪಾರೆಡ್ಡಿ,ನಗರಸಭೆ ಅಧ್ಯಕ್ಷ ಲಲಿತಾ ಕಡಗೋಲ್ ಅಂಜಿನೆಯ್ಯ,ಆರ್.ಡಿ.ಎ ಅಧ್ಯಕ್ಷ ತಿಮ್ಮಪ್ಪ ನಾಡಗೌಡ,ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಶಾಂತಪ್ಪ, ನಗರಸಭೆ ಮಾಜಿ ಸದಸ್ಯರಾದ ಜಿ.ಶಿವಮೂರ್ತಿ, ಟಿ.ಮಲ್ಲೇಶ್,ನರಸಪ್ಪ ಯಾಕ್ಲಾಪೂರ್,ವೀರೇಶ್ ಬೂತಪ್ಪ, ಎಚ್.ಚೇಖರ್,ಜಿ.ಸೂಗಪ್ಪ, ಮೂಲೇಮನಿ ಸೂಗಪ್ಪ,ಎಸ್.ಸಿ ನಾಗವಂದ್,ರಾಜಪ್ಪ ನೆಲಹಾಳ,ವಿ.ಅಂಜಿನೆಯ್ಯ,ಆರ್.ಡಿ.ಎ ಮಾಜಿ ಸದಸ್ಯ ಎ.ಚಂದ್ರಶೇಖರ್,ಬಸವರಾಜ ಕೊಪ್ಪರ್ ಅವರು ಆಗಮಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗುಬ್ಬಲ ವೆಂಕಟೇಶ್ ಮಾಡಿವಳ,ಮಂಜುಳಾ ಅಮರೇಶ, ಈ.ಚಂದಪ್ಪ ಇದ್ದರು.