ನ.೧೩ ಕ್ಕೆ ಕ್ವಿಜ್ – ಚೆಸ್ ಪಂದ್ಯಾವಳಿ

ದಾವಣಗೆರೆ.ನ.೧೦: ನಗರದ ವಿನಾಯಕ ಬಡಾವಣೆಯಲ್ಲಿರುವ ಆನಂದ್ ಪಿ.ಯು. ಕಾಲೇಜು ವತಿಯಿಂದ ಜಿಲ್ಲೆಯ ಪ್ರೌಢಶಾಲಾ ವಿಭಾಗದ ಮಕ್ಕಳಿಗೆ ನ. ೧೩ ರಂದು ಬೆಳಿಗ್ಗೆ ೯.೩೦ ಕ್ಕೆ  ಕ್ವಿಜ್ ಮತ್ತು ಚೆಸ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ಕಾಲೇಜು ಪ್ರಾಂಶುಪಾಲ ಟಿ. ಚಂದ್ರಶೇಖರ್  ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಂದರಿ ೨೦೨೨-೨೩ ನೇ ಸಾಲಿನಿಂದ ಆನಂದ್ ಪದವಿ ಪೂರ್ವ ಕಾಲೇಜಿಗೆ  ಅನುಮತಿ ದೊರೆತಿದ್ದು, ಮುಂದಿನ ದಿನಗಳಲ್ಲಿ ಕಾಲೇಜು ವತಿಯಿಂದ ಅಂತರ ಕಾಲೇಜು ಸ್ಪರ್ಧೆಗಳು, ಕ್ರಿಕೆಟ್ ಮುಂತಾದ ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ನಡೆಸುವ ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರ ನೀಡಲಾಗುವುದು ಎಂದು ಹೇಳಿದರು.ಸ್ಪರ್ಧೆಗಳಿಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ವಿಜೇತರಿಗೆ  ಆಕರ್ಷಕ  ನಗದು ಬಹುಮಾನ ನೀಡಲಾಗುವುದು. ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು ಎಂದು ಮಾಹಿತಿ ನೀಡಿದರು. ಹೆಚ್ಚಿನ ಮಾಹಿತಿಗೆ ಮೊ: ೯೯೦೨೪೭೮೭೧೮,  814೭೯೭೫೯೬೮ ಸಂಪರ್ಕಿಸಲು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ  ಆಡಳಿತಾಧಿಕಾರಿ ಎಂ. ಕಿರಣ್ ಕಡೂರ್ ,  ಅನಿತಾ, ಯುವರಾಜ್, ಹೆಚ್.ಎಂ. ರಾಜಶೇಖರ್ ಉಪಸ್ಥಿತರಿದ್ದರು.