ನ.೧೧ ರಂದು ಕನಕದಾಸ, ಒನುಕೆ ಓಬವ್ವ ಜಯಂತಿ ಆಚರಣೆ- ಎಡಿಸಿ


ರಾಯಚೂರು, ನ.೩, ಜಿಲ್ಲಾಡಳಿತ ವತಿಯಿಂದ ದಾಸ ಶ್ರೇಷ್ಠ ಕನಕದಾಸ ಹಾಗೂ ಒನುಕೆ ಓಬವ್ವ ಜಯಂತಿಯನ್ನು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನ.೧೧ ರಂದು ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದು ಅಪಾರ ಜಿಲ್ಲಾಧಿಕಾರಿ ಡಾ. ದುರುಗೇಶ್ ಹೇಳಿದರು.
ಅವರಿಂದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕನಕದಾಸ ಹಾಗೂ ಒನುಕೆ ಓಬವ್ವ ಜಯಂತಿ ಆಚರಣೆ ಪೂರ್ವಭಾವಿ ಸಿದ್ದತಾ ಸಭೆಯನ್ನು ಸಮಾಜದ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆಸಿ ಮಾತನಾಡಿದ ಅವರು, ದಾಸ ಶ್ರೇಷ್ಠ ಕನಕದಾಸ ಹಾಗೂ ಒನುಕೆ ಓಬವ್ವ ಜಯಂತಿಯನ್ನು ನಗರದ ರಂಗಮಂದಿರದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ ಎಂದರು. ನ.೧೧ ರಂದು ಜಯಂತಿ ಆಚರಿಸುವ ಹಿನ್ನಲೆಯಲ್ಲಿ ಸಂಬಂಧಸಿದ ಅಧಿಕಾರಗಳು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.
ಈ ವೇಳೆ ಸಮಾಜದ ಮುಖಂಡರು ಮದ್ಯೆ ಪ್ರವೇಶಿಸಿ ಮಾತನಾಡಿ ದಾಸ ಶ್ರೇಷ್ಠ ಕನಕದಾಸ ಹಾಗೂ ಒನುಕೆ ಓಬವ್ವ ಜಯಂತಿಯನ್ನು ಕಡ್ಡಾಯವಾಗಿ ಸರಕಾರಿ ಕಚೇರಿಗಳಲ್ಲಿ ಆಚರಣೆ ಮಾಡಲು ಅದೇಶಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಮಂಗಳ ನಾಯಕ್, ಹಾಗೂ ವಿವಿಧ ಸಮಾಜ ಮುಖಂಡರು ಸೇರಿದಂತೆ ಉಪಸ್ಥಿತರಿದ್ದರು.