ನ.ಪಂ. ವಿಪಕ್ಷ ನಾಯಕರಾಗಿ ಬಾಲಕೃಷ್ಣ ಭಟ್ ಕೊಡೆಂಕೆರಿ

ಸುಳ್ಯ, ನ.೯-ಸುಳ್ಯ ನಗರ ಪಂಚಾಯತ್ ವಿಪಕ್ಷ ನಾಯಕರಾಗಿ ಬಾಲಕೃಷ್ಣ ಭಟ್ ಕೊಡೆಂಕೆರಿ ಯವರನ್ನು ನೇಮಕ ಮಾಡಿರುವುದಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಹಾಗೂ ನಗರ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ಶಶಿಧರ್ ಘೋಷಿಸಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆಯಲ್ಲಿ ನಾವು ನಗರದ ೨೦ ವಾರ್ಡ್ ನಲ್ಲಿ ಸ್ಪರ್ಧಿಸಿ, ೪ ವಾರ್ಡ್ ನಲ್ಲಿ ಗೆದ್ದಿದ್ದೇವೆ. ನ.ಪಂ. ನಲ್ಲಿ ವಿಚಾರವನ್ನು ಸಮರ್ಥವಾಗಿ ಮಂಡನೆ ಮಾಡುವ ನಿಟ್ಟಿನಲ್ಲಿ ಹಿರಿಯರಾಗಿರುವ, ನಿವೃತ್ತ ಪ್ರಾಂಶುಪಾಲರಾದ ಬಾಲಕೃಷ್ಣ ಭಟ್ ರನ್ನು ವಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. ಪಕ್ಷದ ಮುಖಂಡರು ಇದ್ದರು.