ನ್ಯೂಮೋಕಾಕಲ್ ಕಾಂಜುಗೇಟ್ ಲಸಿಕೆಯಿಂದ ಮಗುವಿನಲ್ಲಿ ನ್ಯುಮೋನಿಯಾ ಅಪಾಯ ಕಡಿಮೆ

ಕಲಬುರಗಿ,ನ.18:ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ಕಲಬುರಗಿ ನಗರದಲ್ಲಿ ಮೊದಲ ಬಾರಿಗೆ ನ್ಯುಮೋನಿಯಾ ಅಪಾಯ ಕಡಿಮೆ ಮಾಡುವ ನ್ಯೂಮೋಕಾಕಲ್ ಕಾಂಜುಗೇಟ್ ಲಸಿಕೆ (ಪಿಸಿವಿ) ನೀಡಿಕೆಗೆ ಗುರುವಾರ ಚಾಲನೆ ನೀಡಲಾಯಿತು.
ಶಿವಾಜಿನಗರದ ನಗರ ಆರೋಗ್ಯ ಕೇಂದ್ರ ದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀμï ಶಶಿ ಅವರು, ತಾಜ್ ನಗರದ ವೈದ್ಯಾಧಿಕಾರಿ ಡಾ: ವೇಣುಗೋಪಾಲ್ ಅವರ ಒಂದೂವರೆ ತಿಂಗಳ ಗಂಡು ಮಗುವಿಗೆ ಪಿಸಿವಿ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಒಂದೂವರೆ ತಿಂಗಳ ಮಗುವಿಗೆ ಡಿಪಿಟಿ ಲಸಿಕೆಯೊಂದಿಗೆ ಪಿಸಿವಿ ( ನ್ಯುಮೋನಿಯಾ) ಲಸಿಕೆ ಹಾಕಿಸಬೇಕು. ಈ ಲಸಿಕೆಗೆ ಖಾಸಗಿ ಆಸ್ಪತ್ರೆಯಲ್ಲಿ 3 ಸಾವಿರಕ್ಕೂ ಹೆಚ್ಚು ಹಣ ತೆರಬೇಕಾಗುತ್ರದೆ. ಆದರೆ, ಜಿಲ್ಲೆಯ ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುತ್ತದೆ ಎಂದು ಅವರು ತಿಳಿಸಿದರು.
ಪಿಸಿವಿ ಲಸಿಕೆ ಹಾಕಿಸಿದಲ್ಲಿ ನಿಮ್ಮ ಮಗುವಿನಲ್ಲಿ ನ್ಯುಮೋನಿಯಾದ ಅಪಾಯ ಮತ್ತು ಆಸ್ಪತ್ರೆ ಭೇಟಿ ನೀಡುವುದನ್ನು ಕಡಿಮೆ ಮಾಡುತ್ತದೆ ಎಂದು ಅವರು ತಿಳಿಸಿದರು. ನ್ಯುಮೋನಿಯಾವμÉ್ಟಯಲ್ಲ, ಮೆನಿಂಜೈಟಿಸ್ ಹಾಗೂ ಕಿವಿ ಸೋಂಕುಗಳಿಂದಲೂ ಸಹ ರಕ್ಷಿಸುತ್ತದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ನಿರ್ದೇಶಕರಾದ ಡಾ. ಲಕ್ಷ್ಮೀ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣ ಬಸಪ್ಪ ಗಣಜಲಖೇಡ್, ಇಲಾಖೆಯ ಉಪನಿರ್ದೇಶಕ ಡಾ. ಹಬೀಬ್ ಉಸ್ಮಾನ್, ಆರ್.ಸಿ.ಎಚ್. ಅಧಿಕಾರಿ ಡಾ.ಪ್ರಭುಲಿಂಗ ಮಾನಕರ್, ವಿಶ್ವ ಆರೋಗ್ಯ ಸಂಸ್ಥೆಯ ಎಸ್.ಎಂ.ಓ ಡಾ. ಅನಿಲ್ ತಾಳಿಕೋಟಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ರಾಜಕುಮಾರ್, ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಾರುತಿ ರಾವ್, ಆರೋಗ್ಯ ಕೇಂದ್ರದ ಹಿರಿಯ ಆಡಳಿತ ವೈದ್ಯಾಧಿಕಾರಿ ಡಾ. ಎಸ್. ಎಂ. ಸಂಧ್ಯಾರಾಣಿ ಮುಂತಾದವರು ಇದ್ದರು.