ನ್ಯೂಟೌನ್ ಪಿಐ ಮೇಲೆ ಹಲ್ಲೆ: ರೌಡಿಶೀಟರ್‍ಗೆ ಫೈರಿಂಗ್

ಬೀದರ್ ಮೇ 30: ನಗರದಲ್ಲಿ ರೌಡಿಶೀಟರ್ ರಸೂಲ್ ಎಂಬಾತನ ಮೇಲೆ ಫೈರಿಂಗ್ ಮಾಡಲಾಗಿದೆ. ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಪೆÇಲೀಸರ ಮೇಲೆಯೇ ದಾಳಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಫೈರಿಂಗ್ ಮಾಡಲಾಗಿದೆ.
ಬೀದರ್ ನ್ಯೂಟೌನ್ ಠಾಣೆ ಪಿಐ ಸಂತೋಷ್ ಅವರ ಮೇಲೆ ರಸೂಲ್ ಚಾಕುವಿನಿಂದ ದಾಳಿ ಮಾಡಿದ್ದು, ಈ ವೇಳೆ ಆತ್ಮರಕ್ಷಣೆಗಾಗಿ ಪಿಐ ಸಂತೋಷ್ ಫೈರಿಂಗ್ ಮಾಡಿದ್ದಾರೆ.ಬೀದರ್ ನಗರದ ಸಾಯಿ ಸ್ಕೂಲ್ ಆವರಣದ ಬಳಿ ರಾತ್ರಿ ಘಟನೆ ನಡೆದಿದೆ.
ತಪ್ಪಿಸಿಕೊಳ್ಳಲು ಯತ್ನಿಸಿದ ರಸೂಲ್ ಬಲಗಾಲಿಗೆ ಫೈರಿಂಗ್ ಮಾಡಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಗಾಯಾಳು ಪಿಐ ಸಂತೋಷ್ ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರೌಡಿಶೀಟರ್ ರಸೂಲ್‍ನನ್ನು ಚಿಕಿತ್ಸೆಗಾಗಿ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.