ನ್ಯಾ.ಸದಾಶಿವ ಆಯೋಗ ವರದಿ ಜಾರಿ ಮಾಡದ ರಾಜ್ಯ ಸರ್ಕಾರ

ಮಾನ್ವಿ.ಮಾ.೨೧- ನ್ಯಾ. ಸದಾಶಿವ ಆಯೋಗ ವರದಿ ಜಾರಿ ಮಾಡುವುದಾಗಿ ಸುಳ್ಳು ಹೇಳಿದ ಬಿಜೆಪಿ ಪಕ್ಷಕ್ಕೆ ಮಸ್ಕಿ ಮತ್ತು ಇತರೆ ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ಸದಾಶಿವ ಆಯೋಗದ ವರದಿ ಜಾರಿ ಹೋರಾಟದ ಮುಖಂಡರು ಹಾಗೂ ಹೈಕೋರ್ಟಿನ ನ್ಯಾಯವಾದಿಗಳಾದ ಹನುಮೇಶ ಗುಂಡೂರು ಹೇಳಿದರು.
ಪಟ್ಟಣದ ಪತ್ರಿಕಾಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಪಕ್ಷದ ನಾಯಕರುಗಳು ಸದಾಶಿವ ಆಯೋಗ ವರದಿ ಜಾರಿ ಮಾಡುತ್ತೆವೆ ಎಂದು ನಮ್ಮ ಮತಗಳನ್ನು ಕಿತ್ತುಕೊಂಡು ನಮ್ಮ ಸಮುದಾಯಕ್ಕೆ ಬಹಳಷ್ಟು ಮೋಸ ಮಾಡಿದ್ದಾರೆ. ಜನಸಂಖ್ಯೆ ಅನುಗುಣವಾಗಿ ಮೀಸಲಾತಿಯಾಗಬೇಕೆಂಬ ಕೂಗು ಬಹಳ ದಿನಗಳ ಬೇಡಿಕೆ ಹೀಗಾಗಿ ಕಳೆದ ಶಿರಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಅವರು ಬಹಿರಂಗ ವಾಗಿ ಸದಾಶಿವ ವರದಿ ಜಾರಿ ಮಾಡುತ್ತೇವೆ ನಮ್ಮ ಜೊತೆಗೆ ಮಾದಿಗ ಸಮುದಾಯದವರು ಬೆಂಬಲಿಸಿ ಎಂದು ಕೇಳಿಕೊಂಡಿದ್ದರು.ಅದರ ಹಿನ್ನೆಲೆಯಲ್ಲಿ ಶಿರಾ ಚುನಾವಣೆಯಲ್ಲಿ ೪೦ ಸಾವಿರ ಮಾದಿಗ ಸಮುದಾಯದವರು ಬಿಜೆಪಿ ನಾಯಕರ ಭರವಸೆಯಂತೆ ಬಿಜೆಪಿಯನ್ನು ಬೆಂಬಲಿಸಿದೇವು ಆದರೆ ಇದುವರೆಗೂ ಸದಾಶಿವ ವರದಿ ಜಾರಿಗೆ ಯಾವ ನಾಯಕರು ಕೂಡ ಧ್ವನಿ ಎತ್ತಿಲ್ಲ ಹೀಗಾಗಿ ನಮ್ಮ ಸಮುದಾಯದಿಂದ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತ ಕೊಡಬೇಡಿ ಎಂದು ಜಾಗೃತಿ ಮೂಡಿಸುತ್ತಿದ್ದೇವೆ.
ಉಪ ಚುನಾವಣೆ ಮುಗಿದ ನಂತರ ಸದಾಶಿವ ವರದಿ ಜಾರಿ ಮಾಡದಿದ್ದರೆ.ಮುಂಬರುವ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳ ಚುನಾವಣೆಯಲ್ಲಿ ಮಾದಿಗ ಸಮುದಾಯದವರು ಬಿಜೆಪಿ ಪಕ್ಷಕ್ಕೆ ಮತ ಹಾಕುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಭುರಾಜ್ ಕೊಡ್ಲಿ,ಅಮರೇಶ ಗಿರಿಜಾಲಿ, ಅಲ್ಲಮಪ್ರಭು, ಯಲ್ಲಪ್ಪ ಯದ್ದಲದೊಡ್ಡಿ, ಜಯರಾಜ್ ಕೊಡ್ಲಿ,ಹುಲ್ಲೇಶ ಅಮರಾವತಿ, ಪಂಪಣ್ಣ ಅಮರಾವತಿ ಸೇರಿದಂತೆ ಅನೇಕರು ಇದ್ದರು.