ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಕುಕನೂರಲ್ಲಿ ವಿಜಯೋತ್ಸವ


ಸಂಜೆವಾಣಿ ವಾರ್ತೆ
ಕುಕನೂರು, ಮಾ.25:  ನ್ಯಾಯಮೂರ್ತಿಎ..ಜೆ  ಸದಾಶಿವ ಆಯೋಗದ ಶಿಫಾರಸಿನಂತೆ ಎಸ್ಸಿ  ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸಲು ಶುಕ್ರವಾರ ಬೆಂಗಳೂರಿನಲ್ಲಿ  ನಡೆದ ಸಚಿವ ಸಂಪುಟ ಸಭೆಯಲ್ಲಿ ‌ತೀರ್ಮಾನ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಮಾದಿಗ ಸಮುದಾಯದ ವತಿಯಿಂದ ಡಾ. ಬಿಆರ್ ಅಂಬೇಡ್ಕರ್ ವೃತ್ತದಲ್ಲಿ ಸಮಾಜ ಬಾಂಧವರು ವಿಜಯೋತ್ಸವ ಆಚರಿಸಿದರು. ಮುಖಂಡ ಯಮನೂರಪ್ಪ ಗುರಲೆಕೊಪ್ಪ ಮಾತನಾಡಿ, ಪ್ರಸ್ತುತ ಬಿಜೆಪಿ ಸರ್ಕಾರವು ಹಲವಾರು ವರ್ಷಗಳಿಂದ ನೆನ್ನೆ ಗುತ್ತಿಗೆ ಬಿದ್ದಿದ್ದ ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುವ ಮೂಲಕ ಶೋಷಿತ ಸಮುದಾಯದ ಅಭಿವೃದ್ಧಿಗೆ ನಾಂದಿ ಹಾಡಿದೆ. ಇದರ ಹೋರಾಟಕ್ಕಾಗಿ  ಅನೇಕ ಜನರು ಹುತಾತ್ಮರಾಗಿದ್ದಾರೆ ಅವರನ್ನು ನಾವು ನೆನಯಬೇಕು. ಐತಿಹಾಸಿಕ ನಿರ್ಧಾರ ಕೈಗೊಂಡಿರುವ ರಾಜ್ಯ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿ ಬಸವರಾಜ್ ಅವರ ಹಾಗೂ ಸಚಿವರ ಶ್ರಮ ಸ್ಮರಣೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಮೇಶ ಶಾಸ್ತ್ರಿ , ಮಲೆಯಪ್ಪ ಅಣ್ಣಿಗೇರಿ, ಶಿವಪ್ಪ ಭಂಡಾರಿ , ಶಂಕರ್ ಭಂಡಾರಿ, ನಿಂಗಪ್ಪ ಗೋರಲೇಕೊಪ್ಪ, ನಿಂಗಪ್ಪ ಅಣ್ಣಿಗೇರಿ, ಮುತ್ತಪ್ಪ ಹಳ್ಳಿಕೇರಿ, ಮಲ್ಲಿಕಾರ್ಜುನ ಗೋ ರಲೇಕೊಪ್ಪ ಮಂಗಳೇಶ್ ಮಂಗಳೂರು, ಮಂಜುನಾಥ್ ಮೇದರ್, ಪರುಶುರಾಮ ಆರಬೇರಳಿನ್, ಪರಶುರಾಮ ಸಕ್ರನ್ನವರ್, ವೆಂಕಟೇಶ್ ಬಳ್ಳಾರಿ, ಮಲ್ಲಿಕಾರ್ಜುನ್ ಗೊರಲೇಕೊಪ್ಪ, ಹನುಮಂತ ಆರ್ ಬೆರಳಿನ, ರವಿ ಹಿರೇಮನಿ, ಶೇಖರ ಗೊರಲೆಕೊಪ್ಪ ಮತ್ತಿತರರು ಹಾಜರಿದ್ದರು.