ನ್ಯಾ.ಸದಾಶಿವ ಆಯೋಗದ ವರದಿ ಅಧ್ಯಾಯನ ಮಾಡದೇ ತರಾತರಿಯಲ್ಲಿ ಶಿಫಾರಸ್ಸು ಖಂಡನೆ

ವಾಪಸ್ಸು ಪಡೆಯದಿದರೆ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ
ಸಿರವಾರ,ಮಾ.೨೬- ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕಲ್ಪಿಸಲು ರಚಿಸಿದ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿದೆ ಅದನ್ನು ಸರಿಯಾಗಿ ಅಧ್ಯಾಯನ ಮಾಡದೇ ತರಾತುರಿಯಲ್ಲಿ ಬಿಜೆಪಿ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವುದನ್ನು ಖಂಡನಿಯ, ನೂತನ ಜನಗಣತಿ ಮಾಡಿ ಇದನು ಜಾರಿಗೆ ತರಬೇಕು ಇದನು ಅಖಿಲ ಭಾರತ ಬಂಜಾರ ಸಮುದಾಯ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದು ಸಮುದಾಯದ ರಾಜ್ಯ ಮುಖಂಡ ಗೋವಿಂದರಾಜ್ ವಕೀಲರು ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು, ಚುನಾವಣೆ ಹೊಸ್ತಿಲಲ್ಲಿ ಕೇವಲ ಒಂದು ಸಮುದಾಯದ ಮತಗಳನ್ನು ಗಿಟ್ಟಿಸಿಕೊಳ್ಳಲು ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿಯ ಇತರೆ ಸಮುದಾಯಗಳಿಗೆ ಅನ್ಯಾಯವೆಸಗಿದೆ ಎಂದು ಆರೋಪಿಸಿದರು.
ನ್ಯಾ.ಎ.ಜೆ.ಸದಾಶಿವರವರು ಪರಿಶಿಷ್ಟ ಜಾತಿಗಳ ಸ್ಥಿತಿಗತಿ ಸಮೀಕ್ಷೆ ಮಾಡುವಾಗ ರಾಜ್ಯದ ಯಾವ ಬಂಜಾರ ಸಮಾಜದವರು ವಾಸಿಸುವ ತಾಂಡಗಳಿಗೆ ಹೋಗಿ ಸಮೀಕ್ಷೆ ಮಾಡಿಲ್ಲ ಎಲ್ಲೋ ಕುಳಿತು ವರದಿ ತಯಾರಿಸಿ ಸರ್ಕಾರಕ್ಕೆ ನೀಡಿದ್ದಾರೆ ಇದನ್ನು ನಾವು ಒಪ್ಪುವುದಿಲ್ಲ, ಎಲ್ಲಾರಿಗೂ ನ್ಯಾಯ ಸಮ್ಮತವಾಗಿ ಮೀಸಲಾತಿ ನೀಡುವುದಾದರೆ ಮತ್ತೊಮ್ಮೆ ಆಯೋಗ ರಚನೆ ಮಾಡಿ, ನೂತನ ಜನಗಣತಿ ಸಮೀಕ್ಷೆ ನಡೆಸಲಿ ಆಗ ನಾವು ಅದಕ್ಕೆ ಸಹಕಾರ ನೀಡುತ್ತೇವೆ ಎಂದರು.
ಹಿಂದೆ ಕಾಂಗ್ರೆಸ್, ಸಮೀಶ್ರ, ಸರ್ಕಾರವಿದ್ದಾಗ ವರದಿ ಜಾರಿ ಮಾಡಲು ಆಗಲಿಲ್ಲ, ಅಷ್ಟೆ ಯಾಕೆ ಮಾಜಿ ಮುಖ್ಯಮಂತ್ರಿಗಳಾದ. ಸಿದ್ದರಾಮಯ್ಯ,ಬಿ.ಎಸ್.ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ ಸದಾನಂದಗೌಡ, ಅವರು ಸದಾಶಿವ ಆಯೋಗದ ವರದಿ ಜಾರಿ ಮಾಡಲು ಆಗಲಿಲ್ಲ ಈಗ ಚುನಾವಣೆ ಬೆನ್ನಲ್ಲೇ ಆ ಸಮುದಾಯದ ಮತಗಳನ್ನು ಸೆಳೆದು ಅಧಿಕಾರಕ್ಕೆ ಬರಲು ಈ ತರಾತುರಿ ನಿರ್ಧಾರ ಬಿಜೆಪಿ ಸರ್ಕಾರ ತೆಗೆದುಕೊಂಡಿದೆ ಎಂದರು.
ನಿವೃತ್ತ ಡಿಐಜಿ ಟಿ.ಆರ್.ನಾಯ್ಕ್ ಮಾತನಾಡಿ
ಎಡಗೈ, ಬಲಗೈ ಸಮುದಾಯಗಳು ಕಾಂಗ್ರೆಸ್ ಪರ ಇದ್ದಾರೆ ಬಂಜಾರ, ಲಂಬಾಣಿ, ಭೋವಿ, ವಡ್ಡರ, ಕೊರಮ, ಕೊರಚ ಈ ಸಮುದಾಯಗಳು ಇಲ್ಲಿವರೆಗೂ ಬಿಜೆಪಿ ಪರವಾಗಿದ್ದೇವೆ ಕೂಡಲೇ ವರದಿ ಶಿಫಾರಸ್ಸು ಹಿಂಪಡೆಯಬೇಕು, ಕೇಂದ್ರ ಸರ್ಕಾರವೂ ಸಹ ಇದನ್ನು ತಿರಸ್ಕರಿಸಬೇಕು ಇಲ್ಲದಿದ್ದರೆ ಮುಂದಿನ ಈ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ. ಈಗಲೂ ನಮಗೆ ಬಿಜೆಪಿ ಸರ್ಕಾರದ ಮೇಲೆ ನಂಬಿಕೆ ಇದೇ ನಂಬಿಕೆ ಹುಸಿಯಾದರೆ ಸಂಸದರು, ಶಾಸಕರು ರಾಜೀನಾಮೇ ನೀಡುವ ಮೂಲಕ ವಿರೋಧಿಸಬೇಕು ಎಂದು ಎಚ್ಚರಿಕೆ ನೀಡಿದರು.
ಎ.ಐ.ಬಿ.ಎಸ್.ಎಸ್. ಜಿಲ್ಲಾಧ್ಯಕ್ಷ ನಾರಾಯಣ ನಾಯ್ಕ, ಎಸ್.ಶಿವಣ್ಣ ಪವಾರ್, ಶಿವಪ್ಪ ಪವಾರ್ ವಕೀಲರು, ಲಕ್ಷ್ಮಣ್ ರಾಠೋಡ್, ಕೆ.ಬಿ.ಎಸ್.ಎಸ್. ಅಧ್ಯಕ್ಷರಾದ ಶೇಖರಪ್ಪ ರಾಠೋಡ್, ರಾಮು ನಾಯ್ಕ್ ಪವಾರ್, ಅಮರೇಶ ಚವ್ಹಾಣ್, ಕ್ರಿಷ್ಟಪ್ಪ ಪವಾರ್, ತುಳಜಾರಾಮ್ ನಾಯ್ಕ್, ಸೋಮನಾಥ ಪವಾರ್, ಆನಂದ ಪವಾರ್, ನಾಗರಾಜ ಪವಾರ್, ನಾಗರೆಡ್ಡಿ ರಾಠೋಡ್, ಲಾಲಪ್ಪ ರಾಠೋಡ್, ನೀಲಪ್ಪ ರಾಠೋಡ್, ದೇವಪ್ಪ ರಾಠೋಡ್ ಸೇರಿದಂತೆ ಇತರರು ಇದ್ದರು.