ನ್ಯಾ. ಸಂತೋಷ್ ಹೆಗಡೆ ಸೇರಿ ೬೮ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

ಬೆಂಗಳೂರು, ಅ. ೩೦- ರಾಜ್ಯೋತ್ಸವ ಪ್ರಶಸ್ತಿಗೆ ೬೮ ಸಾಧಕರ ಹೆಸರನ್ನು ಅಂತಿಮಗೊಳಿಸಲಾಗಿದ್ದು, ನಾಳೆ ಅಧಿಕೃತವಾಗಿ ಪ್ರಶಸ್ತಿ ಪುರಸ್ಕೃತರ ಹೆಸರು ಘೋಷಣೆಯಾಗಲಿದೆ.
ನಿವೃತ್ತ ನ್ಯಾ. ಸಂತೋಷ್ ಹೆಗಡೆ, ಸಾಹಿತಿ ಕರಿಗೌಡ ಬೀಚನಹಳ್ಳಿ, ರಂಗಕರ್ಮಿ ಚಿದಂಬರ ಜಂಬೆ ಸೇರಿದಂತೆ ಹಲವರ ಹೆಸರು ಪ್ರಶಸ್ತಿ ಪುರಸ್ಕೃತ ಹೆಸರಿನಲ್ಲಿ ಇದೆ ಎಂದು ಹೇಳಲಾಗಿದೆ.
ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಆಯ್ಕೆ ಸಮಿತಿ ಸದಸ್ಯರ ಸಭೆ ನಡೆದಿದ್ದು, ಅಂತಿಮವಾಗಿ ೬೮ ಸಾಧಕರು ಹಾಗೂ ಹತ್ತು ಸಂಘ ಸಂಸ್ಥೆಗಳಿಗೆ ಪ್ರಶಸ್ತಿ ನೀಡುವ ತೀರ್ಮಾನಕ್ಕೆ ಬರಲಾಗಿದೆ.
ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್‌ಹೆಗಡೆ , ನಿರ್ಮಾಪಕ ಸಂದೇಶ್ ನಾಗರಾಜ್, ಸಾಹಿತಿ ಕರೀಗೌಡ ಬೀಚನಹಳ್ಳಿ, ಪತ್ರಕರ್ತರಾದ ದಿನೇಶ್ ಅಮಿನ್‌ಮಟ್ಟು, ಮಾಯಾಶರ್ಮ, ರಂಗಕರ್ಮಿಗಳಾದ ಚಿದಂಬರ ಜಂಬೆ, ಗಂಗಾಧರಸ್ವಾಮಿ, ಸುಜಾತಮ್ಮ, ಜಾನಪದ ಕಲಾವಿದ ಚಂದ್ರುಕಾಳೇನಹಳ್ಳಿ, ಚಲನಚಿಂತ್ರ ನಿರ್ಮಾಪಕ ಸಂದೇಶ್ ನಾಗರಾಜ್, ಜಾನಪದ ಕಲಾವಿದ ಸೋಬಾನೆ ರಾಮಣ್ಣ, ಹುಸೇನಾಬಿ ಬುಡಾಸಾಬ್, ಸಿರಿಗಂಧ ಶ್ರೀನಿವಾಸಮೂರ್ತಿ, ಹುಲಿ ಚಂದ್ರಶೇಖರ್, ಬಯಲಾಟ ಕಲಾವಿದ ನಾರಾಯಣಪ್ಪ, ತಿಮ್ಮಣ್ಣ ರಾಮವಾಡಗಿ, ಚಿತ್ರಕಲಾ ವಿಮರ್ಶಕ ಬಿ.ಎಂ. ಹೆಗಡೆ, ಚಿತ್ರ ಕಲಾವಿದರಾದ ಹೆಚ್.ಸಿ. ಪಾಟೀಲ್, ಕಾಳಪ್ಪ ವಿಶ್ವಕರ್ಮ, ಮಾರ್ತಾ ಜಾಕಿ ಮಾರ್‌ವಿಚ್, ಜಾನಪದ ಕಲಾವಿದರಾದ ಸಿದ್ಧರಾಮಪ್ಪ ವಾಲಿ, ವಿಭೂತಿ ಗುಂಡಪ್ಪ ಸೇರಿದಂತೆ ಹಲವರು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಹೇಳಲಾಗಿದ್ದು, ಅಧಿಕೃತವಾಗಿ ನಾಳೆ ಪ್ರಶಸ್ತಿ ಪುರಸ್ಕೃತರ ಹೆಸರುಗಳು ಪ್ರಕಟವಾಗಲಿದೆ.
ಪ್ರಶಸ್ತಿಗೆ ಸುಮಾರು ೬ ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಮುಖ್ಯಮಂತ್ರಿ ನೇತೃತ್ವದ ಆಯ್ಕೆ ಸಮಿತಿ ಕಳೆದ ೧೫ ದಿನಗಳಿಂದ ನಿರಂತರ ಸಭೆಗಳನ್ನು ನಡೆಸಿ, ೬೮ ಸದಸ್ಯರ ಹೆಸರನ್ನು ಅಂತಿಮಗೊಳಿಸಲಾಗಿದೆ. ಪ್ರಶಸ್ತಿಗೆ ಅರ್ಜಿ ನೀಡದ ಅರ್ಹರನ್ನು ಸಹ ಪ್ರಶಸ್ತಿಗೆ ಪರಿಗಣಿಸಲಾಗಿದೆ.