ನ್ಯಾ.ಮೂ. ಸದಾಶಿವ ಆಯೋಗದ ವರದಿ ಜಾರಿಗೆ ಮನವಿ


ಹಾವೇರಿ,ಮಾ.12: ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದವರದಿ ಶೀಘ್ರದಲ್ಲಿ ಜಾರಿಗೊಳಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಡಿಎಸ್‍ಎಸ್ ರಾಜ್ಯ ಸಮಿತಿ ಸದಸ್ಯರಾದ ಉಡಚಪ್ಪ ಮಾಳಗಿ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಎಡಗೈ ಸಮಾಜದವರು ಕನಿಷ್ಠ 10 ಸಾವಿರದಿಂದ 35 ಸಾವಿರ ಮತದಾರರನ್ನು ಹೊಂದಿದ ಬಹುದೊಡ್ಡ ಸಮಾಜಕ್ಕೆ ಬಹುದೊಡ್ಡ ಅನ್ಯಾಯವಾಗಿದೆ. ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗವು ರಾಜ್ಯಾದ್ಯಂತ ಪರಿಶಿಷ್ಟ ಜಾತಿಯವರಿಗೆ ಇರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೌಲತ್ತು ಹಾಗೂ ಶೈಕ್ಷಣಿಕ, ಸಾಮಾಜಿಕ, ಮತ್ತು ಔದ್ಯೋಗಿಕ ರಂಗದಲ್ಲಿ ಸಮಗ್ರವಾಗಿ ಪರಿಶೀಲಿಸಿ ಅಧ್ಯಯನ ಮಾಡಿ ಪರಿಶಿಷ್ಟ ಜಾತಿಯ ಒಟ್ಟು ಜನಸಂಖ್ಯೆಯಲ್ಲಿ 57.2% ರಷ್ಟು ಇರುವ ಮಾದಿಗರು ಹಾಗೂ ಸಂಬಂಧಿಸಿದ ಎಡಗೈ ಜನಾಂಗದವರು ಇದ್ದು ಅವರ ಸ್ಥಿತಿಗತಿಯನ್ನು ಹಾಗೂ ಕುಲ ಕಸುಬನ್ನು ಅಧ್ಯಯನ ಮಾಡಿ ಈ ಸಮುದಾಯಕ್ಕೆ ಘೋರ ಅನ್ಯಾಯವಾಗಿರುವದನ್ನು ಮನಗಂಡು ಜನ ಸಂಖ್ಯೆಗನುಗುಣವಾಗಿ 15% ರಲ್ಲಿ 6% ರಷ್ಟು ಎಡಗೈ ಸಮುದಾಯಕ್ಕೆ ಮೀಸಲಾತಿ ನೀಡಲು ಸರ್ಕಾರಕ್ಕೆ ಶೀಫಾರಸ್ಸು ಮಾಡಿದ್ದಾರೆ ಈ ವರದಿಯನ್ನು ಜಾರಿ ಮಾಡಲು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಡಿಎಸ್‍ಎಸ್ ರಾಜ್ಯ ಸಮಿತಿ ಸದಸ್ಯರಾದ ಉಡಚಪ್ಪ ಮಾಳಗಿ,ಕಟ್ಟಡ ಕಾರ್ಮಿಕರ ರಾಜ್ಯ ಕಾರ್ಯದರ್ಶಿ ವೈ ಎನ್ ಮಾಸೂರ,ಅಲೆಮಾರಿ ಸಮಾಜದ ಜಿಲ್ಲಾಧ್ಯಕ್ಷ ವಿಬೂತಿ ಶೆಟ್ಟಿ ಮುಖಂಡರಾದ ಮಲ್ಲೇಶ ಕಡಕೋಳ,ಎನ್ ಎನ್ ಗಾಳೆಮ್ಮನವರ,ಶಿವಲಿಂಗಪ್ಪ ನಿಂಗಪ್ಪನವರ,ವಕೀಲರಾದ ಹನಮಂತಪ್ಪ ಸೊಟ್ಟಪ್ಪನವರ,ಶಿವರಾಜ ಹರಿಜನ,ಜಗದೀಶ ಹರಿಜನ,ಮಾರುತಿ ಸೊಟ್ಟಪ್ಪನವರ,ಚಂದ್ರು ಯತ್ನಳ್ಳಿ,ನಾಗಪ್ಪ ಕಾಟೇನಹಳ್ಳಿ ಸೇರಿದಂತೆ ಡಿಎಸ್ ಎಸ್ ಪದಾಧಿಕಾರಿಗಳು ಮುಂತಾದವರು ಇದ್ದರು.