ನ್ಯಾಷನಲ್ ಮಾಸ್ಟರ್ಸ್ ಸ್ವಿಮ್ಮಿಂಗ್ ಚಾಂಪಿಯನಶಿಪ್ ಕಂಚಿನ ಪದಕಗೆದ್ದ ಶಂಕರ್ ಕವಲಗಿ

ಕಲಬುರ್ಗಿ ನ.28- ಮಂಗಳೂರಿನಲ್ಲಿ ನ.26 ರಿಂದ 28 ವರೆಗೆ ನಡೆದ 17ನೇ ನ್ಯಾಷನಲ್ ಮಾಸ್ಟರ್ಸ್ ಚಾಂಪಿಯನಶಿಪ್ ನ ಈಜು ಸ್ಪರ್ಧೆಯಲ್ಲಿ ಕಲಬುರ್ಗಿಈಜುಪಟು ಶಂಕರ್ ಕವಲಗಿ 100 ಮೀ. ಬ್ರೇಸ್ಟ್ ಸ್ಟ್ರೋಕ್ ವಿಭಾಗದಲ್ಲಿತೃತೀಯ ಸ್ಥಾನ ಪಡೆದುಕಂಚಿನ ಪದಕ ವಿಜೇತರಾಗಿದ್ದಾರೆ.

ಕ್ರೀಡಾಕೂಟದಲ್ಲಿ ಸನ್ ಸಿಟಿ ಅಕ್ವಟಿಕ್ಸ್ ಅಸೋಸಿಯೇಷನ್ ವತಿಯಿಂದಕರ್ನಾಟಕತಂಡವನ್ನು ಪ್ರತಿನಿಧಿಸಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ 1:35:47 ಸೆಕೆಂಡ್ ಗಳಲ್ಲಿ ಗುರಿತಲುಪಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ರಾಷ್ಟ ಮಟ್ಟದಈಜುಸ್ಪರ್ಧೆಯಕ್ರೀಡಾಕೂಟದಲ್ಲಿ ಪದಕ ಪಡೆದ ಕಲಬುರ್ಗಿ ಏಕೈಕ ಯುವಈಜುಪಟುಆಗಿದ್ದಾರೆ. ಪ್ರಸ್ತುತಕ್ರೀಡಾಇಲಾಖೆಯಚಂದ್ರಶೇಖರ್ ಪಾಟೀಲ ಕ್ರೀಡಾಂಗಣದ ಈಜುಕೊಳದಲ್ಲಿ ಲೈಫ್‍ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರ ಸಾಧನೆಗೆ ಮಾಜಿ ಸಚಿವಡಾ. ಶರಣಪ್ರಕಾಶ್ ಪಾಟೀಲ್ , ಸನ್ ಸಿಟಿ ಅಕ್ವಟಿಕ್ಸ್‍ಗೌರವಅಧ್ಯಕ್ಷ ಸಿದ್ದರಾಜ್ ಪುಣ್ಯಶೆಟ್ಟಿ, ಅಧ್ಯಕ ಮಹೇಂದ್ರ ಶಾಹ, ಲೋಕೇಶ್ ಪೂಜಾರ್, ಶಂಕರ್ ಹವೇಳಿ, ಶರಣಪ್ಪಕುರಿಕೋಟಾ, ಶಿವಲಿಂಗಪ್ಪ ಸಿಂಗ್ ಶೆಟ್ಟಿ, ಸೋಮೇಶಗೌಡ ಪಾಟೀಲ್, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಆರ್.ಜಿ.ನಾಡಗಿರ್, ಈಜುತರಬೇತುದಾರರಾದ ಮಚೇಂದ್ರ ಸಿಂಗ್ ಠಾಕೂರ್, ರೇಣುಕಾ ಬಿರಾದಾರ್, ಸಂಜೀವ್‍ಕುಮಾರ್, ರಾಘವೇಂದ್ರ ಕೆ, ಪ್ರವೀಣಕುಮಾರ್ ಪುಣೆ ಅಭಿನಂದಿಸಿದ್ದಾರೆ.