
ಕಾಗವಾಡ :ಮಾ.7: ಪಟ್ಟಣದ ಸಂಜಯ ಏಜ್ಯುಕೇಷನ್ ಟ್ರಸ್ಟ್ ನ ರೂರಲ್ ಕಾಲೇಜ್ ಆಫ್ ಫಾರ್ಮಸಿಯಲ್ಲಿ ಭಾರತೀಯ ಫಾರ್ಮಸಿ ಶಿಕ್ಷಣದ ಪಿತಾಮಹ ಮಹಾದೇವಲಾಲ ಶ್ರಾಫರವರ ಜನ್ಮದಿನದ ಅಂಗವಾಗಿ ಮಾರ್ಚ್ 6 ರಂದು ನ್ಯಾಷನಲ್ ಫಾರ್ಮಸಿ ಏಜ್ಯುಕೇಷನ್ ಡೇ ಆಚರಿಸಲಾಯಿತು.
ಮಾರ್ಚ್ 6 ರಂದು ಕಾಗವಾಡ ಫಾರ್ಮಸಿ ಕಾಲೇಜಿನಲ್ಲಿ ಜರುಗಿದ ಸಮಾರಂಭದಲ್ಲಿ ಪ್ರಾಂಶುಪಾಲರಾದ ಎಂ.ವ್ಹಿ.ಸಲಗರೆ ಅವರು ಮಹಾದೇವಲಾಲ ಶ್ರಾಫರವರ ಜೀವನಚರಿತ್ರೆ, ಆತ್ಮಕಥನ ಕುರಿತು ವಿವರವಾಗಿ ಮಾತನಾಡಿದರು. ನಂತರ ಕಾಗವಾಡ ಪಟ್ಟಣದಲ್ಲಿ ವಿದ್ಯಾರ್ಥಿಗಳಿಂದ ರ್ಯಾಲಿಯ ಮೂಲಕ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಅಭಿಯಾನದಲ್ಲಿ ಏಡ್ಸ್ ಹಾಗೂ ಕ್ಯಾನ್ಸರ್ ಇನ್ನಿತರ ಗಂಭೀರ ರೋಗಗಳ ಕುರಿತು ಬೀದಿನಾಟಕ ರೂಪದಲ್ಲಿ ಜನಜಾಗೃತಿಯನ್ನು ಮಾಡಲಾಯಿತು. ಅಭಿಯಾನವು ಫಾರ್ಮಸಿ ಕಾಲೇಜನಿಂದ ಪ್ರಾರಂಭವಾಗಿ ಚೆನ್ನಮ್ಮ ಸರ್ಕಲ್, ಬಸ್ ನಿಲ್ದಾಣ, ಪಟ್ಟಣ ಪಂಚಾಯತಿ ಇನ್ನಿತರ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಈ ಅಭಿಯಾನದಲ್ಲಿ ಕಾಲೇಜಿನ ಪ್ರಥಮ ಹಾಗೂ ದ್ವೀತಿಯ ಡಿಪೆÇ್ಲೀಮಾ ಫಾರ್ಮಸಿ ವರ್ಗದ ವಿದ್ಯಾರ್ಥಿ, ವಿದ್ಯಾರ್ಥಿನಿಯವರು ಭಾಗವಹಿಸಿದ್ದರು.