ನ್ಯಾಷನಲ್ ಕಬಡ್ಡಿ ಪಂದ್ಯಕ್ಕೆ ಅಕ್ಷಯ್ ಕುಮಾರ್ ಸ್ಪರ್ಧೆ

ಸಂಜೆವಾಣಿ ವಾರ್ತೆ
ಕೊಟ್ಟೂರು, ಸೆ.21: ಹರಿಯಾಣ ರಾಜ್ಯದ ಬಿವಾನಿಯಲ್ಲಿ 2020-2021 ನೇ ಸಾಲಿನ ಅಖಿಲ ಭಾರತ ನಾಗರಿಕ ಸೇವಾ ಕಬಡ್ಡಿ ಸ್ಪರ್ಧೆಗಳು ನೆಡೆಯಲಿದ್ದು ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ರಾಂಪುರ ಗ್ರಾಮದ ಯುವ ಪ್ರತಿಭೆ ಅಕ್ಷಯ್ ಕುಮಾರ್ ನ್ಯಾಷನಲ್ ಕ್ರೀಡಾಕೂಟದ ಕಬಡ್ಡಿ ಪಂದ್ಯಾವಳಿಗೆ ಆಯ್ಕೆಯಾಗಿದ್ದು ಈ ಕ್ರೀಡಾಕೂಟದಲ್ಲಿ ಅಕ್ಷಯ್ ಕುಮಾರ್ ಉತ್ತಮ ಪ್ರದರ್ಶನ ನೀಡಿ ಯಶಸ್ವಿಯಾಗಲೆಂದು  ಅದೇನು ಕೊಟ್ಟೂರ ತಾಲ್ಲೂಕಿನ ಕ್ರೀಡಾಭಿಮಾನಿಗಳು ಮತ್ತು ರಾಂಪುರ ಗ್ರಾಮದ ಜನರು ಶುಭಕೋರಿದ್ದಾರೆ.