ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ಹಬ್ಬ

ಬೀದರ:ನ.13:ನಗರದ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧೀನದಲ್ಲಿ ಬರುವ ನ್ಯಾಷನಾಲ್ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ 11-11-2022 ಮತ್ತು 12-11-2022ರಂದು ಮಕ್ಕಳ ಹಬ್ಬವನ್ನು ಬಿ.ವಿ.ಬಿ. ಮೈದಾನದಲ್ಲಿ ಏರ್ಪಡಿಸಲಾಯಿತು ಮಕ್ಕಳ ಹಬ್ಬದ ಸಮಯ ಬೆಳ್ಳಿಗೆ 10.00ಗಂಟೆಯಿಂದ ಸಾಯಂಕಾಲ 4.00 ಗಂಟೆಯ ವರೆಗೆ ಹಮ್ಮಿಕೊಳ್ಳಲಾಯಿತು ಮಕ್ಕಳ ಮನೋರಂಜನೆಗಾಗಿ ಹಲವು ಆಟಗಳು ಮತ್ತು ಅವರಿಗೆ ಇಷ್ಟವಾದ ತಿಂಡಗಳ ಮಳಿಗೆಗಳನ್ನು ಹಾಕಲಾಯಿತು ಇದನ್ನು ಹೈ.ಕ.ಶಿ. ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಡಾ. ರಜನೀಶ ಎಸ್.ವಾಲಿಯವರಿಂದ ಉದ್ಘಾಟಿಸಲಾಯಿತು ಈ ಕಾರ್ಯಕ್ರಮದಲ್ಲಿ ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ. ಪಿ.ವಿಠ್ಠಲ ರಡ್ಡಿ ಹಾಗೂ ಉಪ ಪ್ರಾಚಾರ್ಯರಾದ ಶ್ರೀ ಅನೀಲಕುಮಾರ ಅಣದೂರೆ, ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮಲ್ಲಿಕಾಜುನ ಕನ್ನಕಟ್ಟೆ ಹಾಗೂ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಶ್ರೀಲತಾ, ನಿವೃತ್ತ ಪ್ರೌಢಶಾಲೆಯ ಮುಖ್ಯ ಗುರುಗಳಾದ ಶ್ರೀ ದಾನಿ ಬಾಬುರಾವ ಹಾಗೂ ಎಲ್ಲಾ ಶಿಕ್ಷಕ ವೃಂದದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲಾ ಸದಸ್ಯರು ಎಲ್ಲಾ ಮಳಿಗೆಗಳಿಗೆ ಬೇಟಿ ನೀಡಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು.

ಈ ಮಕ್ಕಳ ಹಬ್ಬದಲ್ಲಿ ಈ ಕೆಳಕಂಡ ಮಳಿಗೆಗಳು ಇದ್ದವು, ರೋಬೋಟ ಬೊಂಬೆಯಲ್ಲಿ ಮಕ್ಕಳು ನಿಂತು ಸಂತಸದಿಂದ ಭಾವಚಿತ್ರವನ್ನು ತೆಗೆಯಿಸಿಕೊಳ್ಳುತ್ತಿದ್ದರು ಇತರ ಅಂಗಡಿಗಳಾದ ಪಾನಿಪುರಿ, ಭೆÉಲಪುರಿ, ಮೊಳಕೆ ಕಾಳುಗಳು, ಬ್ರೆಡ್ ಮತ್ತು ಬಿಸ್ಕಿಟ್ ಸ್ಯಾಂಡವಿಚ್, ಹಲವು ಹಣ್ಣಿನ ರಸಗಳು, ಮಸಾಲ ಪಾಪಡ, ತರಕಾರಿ ಮಿಶ್ರಣ ಮತ್ತು ಹಣ್ಣುಗಳ ಮಿಶ್ರಣ, ನೀರಿನಲ್ಲಿ ನಾಣ್ಯ, ಆಟಿಕೆಗಳ ಮೆಲೆ ರಿಂಗ್ ಹಾಕುವುದು, ಗುರಿ ಇಟ್ಟು ಹೊಡಿಯುವುದು. ಹೀಗೆ ಹಲವಾರು ಮಳಿಗೆಗಳನ್ನು ಆಯೋಜಿಸಲಾಯಿತು ಇದರಿಂದ ಪಾಲಕರು ಮತ್ತು ಮಕ್ಕಳು ಹರ್ಷದಿಂದ ಮತ್ತು ಸಂಭ್ರಮದಿಂದ ಪಾಲ್ಗೊಂಡರು. ಕೊನೆಯ ದಿನದಂದು ಡಾ. ರಜನೀಶ ಎಸ್. ವಾಲಿಯವರ ಸುಪುತ್ರ ಅದೀಶ ವಾಲಿಯವರು ಭೇಟಿ ನೀಡಿ ತಮ್ಮ ಮೆಚ್ಚಿಗೆಯನ್ನು ವ್ಯಕ್ತಪಡಿಸಿದರು.