ನ್ಯಾಯ ಬೆಲೆ ಅಂಗಡಿಗಳಿಗೆ ಭೇಟಿ 

ಹಿರಿಯೂರು.ಜು.21-  ಚಿತ್ರದುರ್ಗ ಲೋಕಾಯುಕ್ತ ಕಚೇರಿಯ ಪೊಲೀಸ್ ನಿರೀಕ್ಷಕರಾದ ಶ್ರೀಮತಿ ಲತಾ. ಬಿ. ಕೆ ರವರು ಕಚೇರಿ  ಸಿಬ್ಬಂದಿಗಳಾದ ಸಂತೋಷ್ ಕುಮಾರ್ ಜಿ. ಎನ್ ಮತ್ತು ಚಂದ್ರಶೇಖರ್ ಆರ್. ಟಿ ರವರೊಂದಿಗೆ ಹಿರಿಯೂರು ನಗರದ  ಆಹಾರ ಇಲಾಖೆ ಮತ್ತು ನಗರದ ಬಸ್ ನಿಲ್ದಾಣ ಸಮೀಪದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಪಾಠ  ಶಾಲೆಗೆ ಅನಿರೀಕ್ಷಿತ ಭೇಟಿ ನೀಡಿದ್ದು ,ಕಚೇರಿಗಳಲ್ಲಿ ದಾಖಲಾತಿಗಳನ್ನು ಪರಿಶೀಲನೆ ಮಾಡಿದರು,. ಆಹಾರ ಇಲಾಖೆಯಲ್ಲಿ ಪಡಿತರ ಚೀಟಿ ವಿತರಣೆ ಸಂಬಂಧ 1201 ಅರ್ಜಿಗಳು ಬಾಕಿ ಇದ್ದು, ವಿಲೇವಾರಿ ಮಾಡುವಂತೆ ಆಹಾರ ಶಿರಸ್ತೇದಾರ್ ಆದ ಲಿಂಗರಾಜು ರವರಿಗೆ ಸೂಚಿಸಿದರು. ಆಹಾರ ನಿರೀಕ್ಷಕರವರು ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ,ಸಾರ್ವಜನಿಕರಿಗೆ ತ್ವರಿತವಾಗಿ ಪಡಿತರ ವಿತರಣೆ ಆಗುತ್ತಿರುವ ಬಗ್ಗೆ ಮತ್ತು ಅಕ್ರಮ ಪಡಿತರ ಸಾಗಾಣಿಕೆಗಳ ಬಗ್ಗೆ ನಿಗಾವಹಿಸುವಂತೆ ತಿಳಿಸಿದರು.  ಪಡಿತರ ಚೀಟಿ ವಿತರಣೆ ಅಥವಾ ತಿದ್ದುಪಡಿಗಳ ವಿಚಾರವಾಗಿ ಸಾರ್ವಜನಿಕರನ್ನು ಪದೇ ಪದೇ ಅಲೆದಾಡಿಸುತ್ತಿರುವ ಬಗ್ಗೆ ದೂರುಗಳು ಬಂದಲ್ಲಿ ಸೂಕ್ತ ಶಿಸ್ತಿನ ಕ್ರಮಕ್ಕಾಗಿ  ಮಾನ್ಯ ಲೋಕಾಯುಕ್ತ ಬೆಂಗಳೂರು ರವರ ಕಚೇರಿಗೆ ವರದಿಯನ್ನು ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಶಾಲೆಯಲ್ಲಿ ಕಲಿಕಾ ಕೊಠಡಿಗಳ ಸಮಸ್ಯೆ ಮತ್ತು ಶೌಚಾಲಯ ವ್ಯವಸ್ಥೆ ಕೊರತೆ ಬಗ್ಗೆ ಮುಖೋಪಾಧ್ಯಾಯರು ತಿಳಿಸಿದ್ದು,, ಈ ಬಗ್ಗೆ ಇಲಾಖಾ ಮೇಲಾಧಿಕಾರಿಗಳಿಗೆ ಸೂಕ್ತ ಕ್ರಮವಹಿಸಲು  ಪತ್ರ ಸಲ್ಲಿಸುವುದಾಗಿ ತಿಳಿಸಿದರು.

Attachments area